ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕ: ಕಂಪನಿಗೆ ವಂಚಿಸಿದ ಆರೋಪ ಹೊರಿಸಿ ವ್ಯಕ್ತಿಯ ಕಿಡ್ನ್ಯಾಪ್: 3 ಜನ ಆರೋಪಿಗಳು ಅಂದರ್..

ಯಲಹಂಕ: ಬೆಂಗಳೂರಿನಲ್ಲಿ ಕಂಪೆನಿ ವೆಬ್ ಸೈಟ್ ಡೇಟಾ ಅಳಿಸಿ ಹಾಕಿ, ಲಕ್ಷಾಂತರ ರೂಪಾಯಿ ನಷ್ಟಕ್ಕೆ ಕಾರಣವಾಗಿದ್ದ ವ್ಯಕ್ತಿನ ವಾಮಮಾರ್ಗದಿಂದ ಕರೆಯಿಸಿ ಕಾರಿನಲ್ಲಿ ಕಿಡ್ನ್ಯಾಪ್ ಮಾಡಲಾಗಿತ್ತು. ನಂತರ ಬೆದರಿಸಿ ಸುಲಿಗೆ ಮಾಡಿದ ಆರೋಪದಡಿ ಮೂರು ಜನ ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಕಿಡ್ನ್ಯಾಪ್ ಗೆ ಒಳಗಾದ ಅಜಯ್ ಪಾಂಡೆಯ ದೂರಿನ ಮೇರೆಗೆ ಚೈತನ್ಯಶರ್ಮಾ, ವೈಭವ್ ಹಾಗೂ ಅಮಿತ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ‌. ಪ್ರಕರಣದಲ್ಲಿ ನಾಲ್ವರು ಭಾಗಿಯಾಗಿದ್ದು, ಓರ್ವ ತಲೆಮರೆಸಿಕೊಂಡಿದ್ದಾನೆ..

ಆರೋಪಿಗಳ ಪೈಕಿ ಚೈತನ್ಯ ಬಾಣಸವಾಡಿಲಿ ಲ್ಯಾಂಪ್ಸ್ ಕಾರ್ಟ್ ಕಂಪನಿ ಮಾಲೀಕ. ಉದ್ಯಮಕ್ಕೆ ವೆಬ್ ಸೈಟ್ ಸಿದ್ದಪಡಿಸುವಂತೆ ಅಜಯ್ ಪಾಂಡೆಗೆ ಸೂಚಿಸಿದ್ದ. ಇದರಂತೆ ಪಾಂಡೆ ವೆಬ್ ಡಿಸೈನ್ ಮಾಡಿಕೊಟ್ಟಿದ್ದ‌.‌‌ ಒಂದು ವರ್ಷವಾದರೂ ಪಾಂಡೆಗೆ ಡಿಸೈನಿನ ದುಡ್ಡು ಕೊಟ್ಟಿರಲಿಲ್ಲ. ತರುವಾಯ ನವೀಕರಣ ಹಾಗೂ ವೆಬ್ ನಿರ್ವಹಣೆಗಾಗಿ ಚೈತನ್ಯ ಬಳಿ ಪಾಂಡೆ ಹೆಚ್ಚುವರಿ ಹಣ ಕೇಳಿದ್ದ, ಚೈತನ್ಯ ಕೊಟ್ಟಿರಲಿಲ್ಲ. ಇದರಿಂದ ಅಸಮಾಧಾನಗೊಂಡು ವೆಬ್ ಸೈಟ್ ನಲ್ಲಿರುವ ಡೇಟಾ ಅಳಿಸಿ ಕಂಪ್ಲೀಟ್ ಶಟ್ ಡೌನ್ ಆಗುವಂತೆ ಪಾಂಡೆ ನೋಡಿಕೊಂಡಿದ್ದ..

ಏಪ್ರಿಲ್ 23ರಂದು ಯಲಹಂಕದ RMZ ಮಾಲ್ ಬಳಿಗೆ ಅಜಯ್ ಪಾಡೆಯನ್ನ ಚೈತನ್ಯ ಕರೆಸಿಕೊಂಡಿದ್ದ.ಪಾಂಡೆಯ ಪರಿಚಿತ ವ್ಯಕ್ತಿಯಿಂದ 6.35 ಲಕ್ಷ ಬಲವಂತವಾಗಿ ವರ್ಗಾಯಿಸಿಕೊಂಡು ಪಿಸ್ತೂಲ್ ತೋರಿಸಿ ಬೆದರಿಸಿ ಹಣ ವಸೂಲಿ ಮಾಡಲಾಗಿತ್ತು. ಇದರ ವಿರುದ್ಧ ಪಾಂಡೆ‌ ಠಾಣೆ ಮೆಟ್ಟಿಲೇರಿದ್ದ.‌ ಯಲಹಂಕ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆಲಿ ಪಿಸ್ತೂಲ್ ಬಳಕೆ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿ, ಮತ್ತೊಬ್ಬ ಆರೋಪಿ ವಶಕ್ಕೆ ಬಲೆ ಬೀಸಿದ್ದಾರೆ.

-ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್, ಯಲಹಂಕ

Edited By : Shivu K
PublicNext

PublicNext

28/04/2022 05:22 pm

Cinque Terre

36.6 K

Cinque Terre

0

ಸಂಬಂಧಿತ ಸುದ್ದಿ