ನೆಲಮಂಗಲ: ಹೆಣ್ಣು, ಹೊನ್ನು, ಮಣ್ಣು ಅಂದ್ರೆ ಹೆಣಾನು ಬಾಯಿ ಬಿಡುತ್ತೆ ಅನೋ ಹಾಗೆ, ಸಾಯೋವಯಸ್ಸಲ್ಲಿ ಕಿರಿ ಮಗನ ಮನೆಯಲ್ಲಿ ಆಶ್ರಯ ಪಡೆದಿದ್ದ ತನ್ನ ಹೆತ್ತಮ್ಮನನ್ನ ಹಿರಿಮಗ, ಸೊಸೆ ಮತ್ತು ಮೊಮ್ಮೊಗ ಇರೋ ತುಂಡು ಭೂಮಿಗಾಗಿ ಕೊಂದಿರುವ ಆರೋಪ ಕೇಳಿ ಬಂದಿದೆ.
ಕೊನೆಗಾಲದಲ್ಲಿ ಮಕ್ಕಳು ಮೊಮ್ಮಕ್ಕಳ ಜೊತೆ ಕಾಲ ಕಳೆಯಬೇಕಿದ್ದ ವೃದ್ದೆ ಶವವಾಗಿ ಮಲಗಿರುವ ದೃಶ್ಯಗಳಿಗೆ ಸಾಕ್ಷಿ ಆಗಿದ್ದು, ನೆಲಮಂಗಲ ತಾಲೂಕಿನ ಭಕ್ತನಪಾಳ್ಯ ಗ್ರಾಮದಲ್ಲಿನ 20x30 ಅಡಿ ಅಳತೆಯುಳ್ಳ ಒಂದು ಸಣ್ಣ ನಿವೇಶನಕ್ಕಾಗಿ. ಭಕ್ತನಪಾಳ್ಯ ನಿವಾಸಿಯಾದ ಲಕ್ಷ್ಮಮ್ಮ ಒಂದು ತುಂಡು ಭೂಮಿ ವಿಚಾರವಾಗಿ ದೊಡ್ಡ ಮಗ ಹನುಮಂತರಾಜು, ಅವನ ಹೆಂಡತಿ ಮಂಜುಳ ಹಾಗೂ ಮಗ ಅಭಿಷೇಕ್ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ.
ಹೌದು. ತುಂಡು ಭೂಮಿ ವಿಚಾರಕ್ಕೆ ಅಣ್ಣ, ತಮ್ಮಂದಿರ ನಡುವೆ ಗಲಾಟೆ ಇತ್ತು. ಕಳೆದ ಸುಮಾರು ವರ್ಷಗಳ ಹಿಂದೆ ಹಿರಿಮಗ ಹನುಮಂತರಾಜು ದಾಖಲೆ ಪತ್ರಗಳನ್ನ ತೆಗೆದುಕೊಂಡು ಹೋಗಿದ್ದ, ತಮ್ಮನಿಗೆ ಸೇರಿದ ಜಾಗದ ವಿಸ್ತೀರ್ಣ ಸ್ವಲ್ಪ ಹೆಚ್ಚಾಗೆ ಇತ್ತು. ಇದರ ಸಲುವಾಗಿ ತನಗೂ ಆ ಜಾಗದಲ್ಲಿ ಪಾಲು ಬೇಕು, ಸಹಿ ಹಾಕು ಅಂತ ಲಕ್ಷ್ಮಮ್ಮಳನ್ನ ಪೀಡಿಸುತ್ತಿದ್ನಂತೆ, ಮೊದಲು ಪತ್ರ ತಂದುಕೊಡು ಆ ಮೇಲೆ ಸಹಿ ಹಾಕ್ತೀನಿ ಅಂತ ಲಕ್ಷ್ಮಮ್ಮ ಹೇಳ್ತಿದ್ಲಂತೆ.
ಈ ವಿಚಾರವಾಗಿ ನೆನ್ನೆ ತಮ್ಮ ಗಂಗರಾಜನ ಮನೆಯಲ್ಲಿದ್ದ ತಾಯಿ ಮತ್ತು ಹಿರಿಮಗನ ನಡುವೆ ಮಾತಿಗೆ ಮಾತು ಬೆಳೆದಿತ್ತಂತೆ. ಜಗಳ ವಿಕೋಪಕ್ಕೆ ತಿರುಗಿ ಲಕ್ಷ್ಮಮ್ಮಳಿಗೆ ದೊಡ್ಡ ಮಗನ ಹೆಂಡತಿ ಹಾಗೂ ಮೊಮ್ಮಗ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಚಿಕ್ಕ ಮಗ ಗಂಗರಾಜು ಮನೆಯ ಹೊರಗೆ ಬೈಕ್ ತೊಳೆಯುತ್ತಿದ್ದಾಗ ಜಗಳ ನಡೆದಿದ್ದು ಗಲಾಟೆಯಾಗಿ 3-4 ಗಂಟೆಯ ನಂತ್ರ ಲಕ್ಷ್ಮಮ್ಮ ಊಟ ಮಾಡಿ ಮಲಗಿದ್ರಂತೆ. ಕೆಲ ಕಾಲದ ನಂತರ ಎದೆ ನೋವು ಕಾಣಿಸಿಕೊಂಡಿದ್ರಿಂದ ಸ್ಥಳೀಯ ಆಸ್ಪತ್ರೆಗೆ ಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸುವ ಮಾರ್ಗ ಮಧ್ಯೆ ವೃದ್ದೆ ಸಾವನ್ನಪ್ಪಿದ್ದಾಳೆ.
ಸದ್ಯ ಘಟನೆ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ವೃದ್ಧೆಯ ಶವ ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸರ ಪೂರ್ಣ ತನಿಖೆಯ ಬಳಿಕ ವೃದ್ಧೆಯ ಸಾವಿಗೆ ನಿಖರ ಕಾರಣ ತಿಳಿಯಬೇಕಿದೆ.
Kshetra Samachara
28/04/2022 08:32 am