ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಎಲೆಕ್ಟ್ರಿಕ್ ಬೈಸಿಕಲ್ ಗಳಲ್ಲಿ ಮಕ್ಕಳ ಡೇಂಜರಸ್ ಸ್ಟಂಟ್

ಬೆಂಗಳೂರು: ಬೆಂಗಳೂರಿನಲ್ಲಿ ಖಾಸಗಿ ಕಂಪನಿ ಒಂದು ಎಲೆಕ್ಟ್ರಿಕ್ ಬೈಸಿಕಲ್ ಗಳನ್ನು ಜನರಿಗೆ ಉಪಯೋಗವಾಗಲು ಪ್ರಾರಂಭಿಸಿತು. ಆದರೆ ಈಗ ಮಕ್ಕಳು ಎಲೆಕ್ಟ್ರಿಕ್ ಬೈಸಿಕಲ್ ಗಳಲ್ಲಿ ಡೇಂಜರ್ ಸ್ಟಂಟ್ ಗಳನ್ನು ಮಾಡುತ್ತಿದ್ದಾರೆ. ಶಾಲಾ ಮಕ್ಕಳಿಗೆ ಈಗ ಬೇಸಿಗೆ ರಜೆ ಇರುವಂತಹ ಕಾರಣ ಮಕ್ಕಳು ಎಲೆಕ್ಟ್ರಿಕ್ ಬೈಸಿಕಲ್ ಗಳನ್ನು ಕೊಂಡು ರಸ್ತೆಗಳ ಮೇಲೆ ಸ್ಟಂಟ್ ಮಾಡಿ ತಮ್ಮ ಜೀವಕ್ಕೂ ಮತ್ತು ಬೇರೆಯವರ ಜೀವಕ್ಕೂ ಕುತ್ತು ತರುತ್ತಿದ್ದಾರೆ.

ಎಲೆಕ್ಟ್ರಿಕ್ ಬೈಸಿಕಲ್ನಲ್ಲಿ ಒಬ್ಬರೇ ಪ್ರಯಾಣ ಮಾಡಬೇಕು. ಆದರೆ ಮಕ್ಕಳು ಮೂರು ಜನ ಈ ಬೈಸಿಕಲ್ ನಲ್ಲಿ ಕುಳಿತುಕೊಂಡು ಬೆಂಗಳೂರಿನ ಮುಖ್ಯ ರಸ್ತೆಗಳಲ್ಲಿ ಚಲಿಸುತ್ತಿದ್ದಾರೆ. ಮೊದಲೇ ಮುಖ್ಯ ರಸ್ತೆಗಳಲ್ಲಿ ವಾಹನಗಳು ಸ್ಪೀಡಾಗಿ ಹೋಗುತ್ತಿರುತ್ತೆ. ಅಪಘಾತ ಆದರೆ ಇದಕ್ಕೆ ಯಾರು ಹೊಣೆಯಾಗುತ್ತಾರೆ. ಮಡಿವಾಳದ ರಸ್ತೆಯಲ್ಲಿ ಮಕ್ಕಳು ಎಲೆಕ್ಟ್ರಿಕ್ ಬೈಸಿಕಲ್ ಗಳಲ್ಲಿ ವೀಲಿಂಗ್ ಮಾಡಿ ಜನರಿಗೆ ತೊಂದರೆ ನೀಡುತ್ತಿದ್ದಾರೆ.

ಮಕ್ಕಳು ರಸ್ತೆಯ ಮೇಲೆ ಬಿದ್ದು ಎದ್ದು ಬೈಸಿಕಲ್ ಗಳಿಂದ ವೀಲಿಂಗ್ ಮಾಡಿ ಜನರಿಗೆ ಕಾಟ ಕೊಡುತ್ತಿದ್ದಾರೆ. ಮತ್ತು ರಸ್ತೆಯ ಮೇಲೆ ವಾಹನ ಚಲಾಯಿಸುವವರ ಪಕ್ಕದಲ್ಲೇ ಹೋಗಿ ವೀಲಿಂಗ್ ಮಾಡಿ ತೊಂದರೆ ನೀಡುತ್ತಿದ್ದಾರೆ. ಇದರ ಬಗ್ಗೆ ಎಲೆಕ್ಟ್ರಿಕ್ ಸೈಕಲ್ ಕಂಪನಿ ಹತ್ತಿರ ಮಾತನಾಡಿದಾಗ ಮಕ್ಕಳ, ಪೋಷಕರ ನಿರ್ಲಕ್ಷ್ಯದ ಕಾರಣ ಈ ರೀತಿ ಆಗುತ್ತಿದೆ. ಇದರ ಮೇಲೆ ನಾವು ಕೂಡಲೇ ಕ್ರಮ ಕೈಗೊಳ್ಳುತ್ತೇವೆ ಎಂದು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.

ಒಟ್ಟಿನಲ್ಲಿ ಜನರಿಗೆ ಉಪಯೋಗವಾಗಲಿ ಎಂದು ಎಲೆಕ್ಟ್ರಿಕ್ ಸೈಕಲ್ ಗಳನ್ನು ರಸ್ತೆ ಮೇಲೆ ಬಿಟ್ಟರೆ ಇದನ್ನು ಮಕ್ಕಳು ದುರುಪಯೋಗಪಡಿಸಿಕೊಂಡು ತಮ್ಮ ಜೀವಕ್ಕೆ ಮತ್ತು ಬೇರೆಯವರ ಜೀವಕ್ಕೂ ಕುತ್ತು ತರುತ್ತಿದ್ದಾರೆ.

ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು.

Edited By : Nagesh Gaonkar
PublicNext

PublicNext

27/04/2022 10:40 pm

Cinque Terre

58.74 K

Cinque Terre

2

ಸಂಬಂಧಿತ ಸುದ್ದಿ