ನೆಲಮಂಗಲ: ಮಾನಸಿಕವಾಗಿ ಮನನೊಂದಿದ್ದ ಒರಿಸ್ಸಾ ಮೂಲದ ವ್ಯಕ್ತಿಯೋರ್ವ ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕು ಕಾಚೋಹಳ್ಳಿ ಬಳಿ ನಡೆದಿದೆ.
ಒರಿಸ್ಸಾದಿಂದ ಜೀವನ ಅರಸಿ ಬೆಂಗಳೂರಿಗೆ ಬಂದಿದ್ದ 28 ವರ್ಷ ಪ್ರಭಾಕರ್ ಮೃತ ದುರ್ದೈವಿಯಾಗಿದ್ದು, ತನ್ನ ಸಹೋದರನೊಟ್ಟಿಗೆ ಕಾಟನ್ ಬಾಕ್ಸ್ ತಯಾರಿಕಾ ಫ್ಯಾಕ್ಟರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ.
ಆದರೆ ಜೀವನದಲ್ಲಿ ಮಾನಸಿಕವಾಗಿ ನೊಂದಿದ್ದ ಪ್ರಭಾಕರ್, ಇದ್ದಕ್ಕಿದ್ಹಾಗೆ ಕಾಚೋಹಳ್ಳಿ ನಿರ್ಜನ ಪ್ರದೇಶದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
27/04/2022 07:04 pm