ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಒಂದು ಕಿಡ್ನಿ ನಾಲ್ಕು ಕೋಟಿ ಹೆಸರಲ್ಲಿ ವಂಚನೆ: ಮೂವರು ವಿದೇಶಿ ಪ್ರಜೆಗಳ ಬಂಧನ

ಬೆಂಗಳೂರು: ಪ್ರತಿಷ್ಠಿತ ಆಸ್ಪತ್ರೆಗಳ ನಕಲಿ ವೆಬ್‌ಸೈಟ್ ಬಳಸಿ ಕಿಡ್ನಿ ಕೊಟ್ರೆ 4 ಕೋಟಿ ಹಣ ನೀಡುವುದಾಗಿ ಜಾಹೀರಾತು ನೀಡಿ ಸಾರ್ವಜನಿಕರಿಗೆ ವಂಚಿಸಿದ್ದ ಮೂವರು ವಿದೇಶಿ ಪ್ರಜೆಗಳನ್ನು ಆಗ್ನೇಯ ಸೆನ್ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾದ ಮಿನಿ‌ಮಿರಾಕಲ್, ಕೋವಾ ಕೋಲಿಂಚ್ ಹಾಗೂ ಘಾನಾದ ಮ್ಯಾಥ್ಯೂ ಇನ್ನೋಸೆಂಟ್ ಬಂಧಿತ ಆರೋಪಿಗಳಾಗಿದ್ದಾರೆ. ಕಿಡ್ನಿ ಕೊಳ್ಳುವ ಹಾಗೂ ಮಾರುವವನ್ನು ಗುರಿಯಾಗಿಸಿಕೊಂಡ ಈ ಮೂವರು ಇತ್ತೀಚೆಗೆ ಸಾಗರ್ ಅಪೋಲೋ ಆಸ್ಪತ್ರೆಯ ಹೆಸರಲ್ಲಿ ನಕಲಿ ವೆಬ್ ಸೈಟ್ ತೆರೆದಿದ್ರು. ಕಿಡ್ನಿ ಕೊಡುವ ಮೊದಲು 2 ಕೋಟಿ ಹಾಗೂ ಕೊಟ್ಟಮೇಲೆ 2 ಕೋಟಿ ನೀಡುವುದಾಗಿ ಜಾಹೀರಾತು ನೀಡಿದ್ದರು.

ಈ ಸಂಬಂಧ ಸಾಗರ್ ಅಪೋಲೋ ಆಸ್ಪತ್ರೆಯ ನಿರ್ದೇಶಕ ಮಹೇಂದ್ರ ಹೆಚ್ಎಸ್ಆರ್ ಲೇಔಟ್‌ನ ಸಿಇಎನ್ ಠಾಣೆಗೆ ದೂರು ದಾಖಲಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ನಡೆಸಿದ ಇನ್ಸ್ಪೆಕ್ಟರ್ ಯೋಗೇಶ್ ಮತ್ತು ತಂಡ ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ‌ ಯಶಸ್ವಿಯಾಗಿದೆ.

ಅಮೃತಹಳ್ಳಿಯ ಅಪಾರ್ಟ್‌ಮೆಂಟ್ ನಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ವೇಳೆ ಬೃಹತ್ ವಂಚನೆಯ ರಾಕೆಟ್ ಪತ್ತೆಯಾಗಿದೆ. ವಿಚಾರಣೆ ವೇಳೆ ಬ್ಯಾಪ್ಟಿಸ್ಟ್, ಕಾವೇರಿ ಆಸ್ಪತ್ರೆ ಸೇರಿದಂತೆ ಪ್ರಸಿದ್ಧ ಆಸ್ಪತ್ರೆಗಳ ನಕಲಿ ವೆಬ್‌ಸೈಟ್‌ಅನ್ನು ಆರೋಪಿಗಳು ಸೃಷ್ಟಿಸಿರುವುದಾಗಿ ಬಾಯ್ಬಿಟ್ಟಿದ್ದಾರೆ.

ಆರೋಪಿಗಳು ವಾಟ್ಸ್ಆ್ಯಪ್ ಮುಖಾಂತರ ನೋಂದಣಿ ಹಾಗೂ ವಿವಿಧ ಮಾದರಿಯ ಶುಲ್ಕ ನೆಪದಲ್ಲಿ ಕಿಡ್ನಿ ಕೊಳ್ಳುವ ಹಾಗೂ ಮಾರುವವರನ್ನು ಗುರಿಯಾಗಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದರು. ಈ ಎಲ್ಲಾ ಕೆಲಸವನ್ನು ಫೋನ್ ಮುಖಾಂತರವೇ ನಡೆಸುತಿದ್ದ ಆರೋಪಿಗಳು, ಬಲೆಗೆ ಬಿದ್ದವರಿಗೆ ಹಣದ ಆಸೆ ಹುಟ್ಟಿಸಿ ಕೊನೆಗೆ ಬ್ಯಾಂಕ್‌ನಲ್ಲಿ ಹಣ ಡೆಪಾಸಿಟ್ ಆಗಿದೆ. ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗಬೇಕು. ಹಣ ಬಂದ್ರೆ ಶೇ 30ರಷ್ಟು ಕಮಿಷನ್ ನೀಡಬೇಕು ಎನ್ನುತ್ತಿದ್ದರಂತೆ. ಕೋಟಿ ಆಸೆಗೆ ಬಿದ್ದು ಹಣ ಕಳೆದುಕೊಂಡವರು ಯಾರಾದ್ರು ಇದ್ರೆ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Edited By :
PublicNext

PublicNext

25/04/2022 09:59 pm

Cinque Terre

47.71 K

Cinque Terre

1

ಸಂಬಂಧಿತ ಸುದ್ದಿ