ದೊಡ್ಡಬಳ್ಳಾಪುರ: ನಿವೃತ್ತ ಡಿವೈಎಸ್ಪಿ ಕೋನಪ್ಪರೆಡ್ಡಿ ಅವರು ಜಮೀನು ವಿಚಾರದಲ್ಲಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಅವರ ಸಂಬಂಧಿಕರು ಎನ್ನಲಾದ ಆಂಜನೇಯ ರೆಡ್ಡಿ ಕುಟುಂಬದ ಸದಸ್ಯರು ಜೆಕೆವಿ ಬಡಾವಣೆಯಲ್ಲಿ ಓವರ್ ಹೆಡ್ ಟ್ಯಾಂಕ್ ಏರಿ ಸಾಮೂಹಿಕ ಆತ್ಮಹತ್ಯೆ ಬೆದರಿಕೆ ಹಾಕಿದ್ದಾರೆ.
ಕೋನಪ್ಪರೆಡ್ಡಿ ಅವರು ಸ್ಥಳಕ್ಕೆ ಬಂದು ವಿವಾದ ಇತ್ಯರ್ಥದ ಭರವಸೆ ನೀಡುವವರೆಗೂ ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಆಂಜನೇಯ ರೆಡ್ಡಿ ಕುಟುಂಬದ ನಾಲ್ವರು ಪುರುಷರು, ನಾಲ್ವರು ಮಹಿಳೆಯರು ಆತ್ಮಹತ್ಯೆಗೆ ಮುಂದಾಗಿದ್ದಾರೆ.
ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮನವೊಲಿಸಿದರೂ ಆಂಜನೇಯ ರೆಡ್ಡಿ ಕುಟುಂಬಸ್ಥರು ಪಟ್ಟು ಸಡಿಸುತ್ತಿಲ್ಲ. ಕೋನಪ್ಪರೆಡ್ಡಿ ವಿರುದ್ದ ಚಿಂತಾಮಣಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೂ ಸ್ವೀಕರಿಸುತ್ತಿಲ್ಲ. ಹಾಗಾಗಿ ನಾವೆಲ್ಲ ಸಾಮೂಹಿಕ ಆತ್ಮಹತ್ಯೆಗೆ ಮುಂದಾಗಿದ್ದೇವೆ ಎಂದು ಆಂಜನೇಯ ರೆಡ್ಡಿ ಹೇಳಿದರು. ಆಂಜನೇಯ ರೆಡ್ಡಿ ಕುಟುಂಬ ಚಿಂತಾಮಣಿ ತಾಲ್ಲೂಕಿನ ಕೊಂಡವೆನಕಹಳ್ಳಿ ಗ್ರಾಮದವರು.
PublicNext
25/04/2022 01:12 pm