ಯಲಹಂಕ: ವ್ಯವಸ್ಥಿತವಾಗಿ ಪ್ಲಾನ್ ಮಾಡಿಕೊಂಡು ಕಾಲ್ ರಿಸೀವ್ ಮಾಡುವ ಅಮಾಯಕರನ್ನು ಬಲೆಗೆ ಬೀಳಿಸುವುದೇ ಇವರ ವೃತ್ತಿಯಾಗಿತ್ತು. ನಿರಂತರ ಕಾಲ್ಸ್‌ಗೆ ಯಾರಾದರೂ ಅಮಾಯಕರು ಕನೆಕ್ಟ್ ಆದರೆ ಅವರ ಬಳಿ ಎಷ್ಟು ಸಾಧ್ಯವೋ ಅಷ್ಟು ಹಣ ವಸೂಲಿ ಮಾಡಿ, ಮೊಬೈಲ್ ಸ್ವಚ್ಡ್ ಆಫ್ ಮಾಡಿಕೊಳ್ಳುತ್ತಿದ್ದರು. ಇಂತಹ ಖತರ್ನಾಕ್ ಗ್ಯಾಂಗಿಗೆ ಯಲಹಂಕ ಸೈಬರ್ ಕ್ರೈ ಪೊಲೀಸರು ಕೋಳ ತೊಡಿಸಿದ್ದಾರೆ.
ಬೆಂಗಳೂರು ಸುತ್ತಮುತ್ತ ಬ್ಯುಸಿನೆಸ್ ಲೋನ್ ಕೊಡಿಸುತ್ತೇವೆ ಎನ್ನುತ್ತಿದ್ದರು. ಟಾಟಾ ಕ್ಯಾಪಿಟಲ್ ಫೈನಾನ್ಸ್‌ನಲ್ಲಿ ಲೋನ್ ಸಿಗುತ್ತದೆ ಎನ್ನುತ್ತಾ ಗ್ರಾಹಕರನ್ನ ಸೆಳೆಯುತ್ತಿದ್ದರು. ಏಪ್ರಿಲ್ 11ರಂದು ಒಬ್ಬ ಲೋನ್ ಪಡೆಯೋ ಆಸಾಮಿಗೆ ನಿಮಗೆ 18 ಲಕ್ಷ ರೂ. ಲೋನ್ ಅಪ್ರೂವಲ್ ಆಗಿದೆ ಎಂದು ನಂಬಿಸಿದ್ದರು. ಇವರ ಬಳಿ ಅಪ್ಲಿಕೇಶನ್ ಫೀಸ್, ಅಪ್ರೂವಲ್ ಫೀಸ್, ಪ್ರೊಸೆಸ್ಸಿಂಗ್ ಫೀಸ್ ಅಂತ ಬರೋಬ್ಬರಿ 1,33,000 ರೂ. ಪಡೆದು ಮೋಸ ಮಾಡಿದ್ದರು. ಹಣ ಕಳೆದುಕೊಂಡ ಸಂತ್ರಸ್ತ ಯಲಹಂಕ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಬೆಂಗಳೂರು ಸುತ್ತಮುತ್ತಲಿನ ಸತೀಶ್, ಉದಯ್, ಜಯರಾಂ, ವಿನಯ್ ಎಂಬ ಖದೀಮ ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ.
ಸದ್ಯ ಮೇಲಿನ ನಾಲ್ಕು ಜನ ಖದೀಮರು ಯಲಹಂಕ ಒಂದೇ ಅಲ್ಲದೇ ಬೆಂಗಳೂರು ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ಭಾಗದಲ್ಲಿಲೂ ಬೇರೆ ಬೇರೆ ಅಪರಾದ ಕಾರ್ಯಗಳಲ್ಲಿ ಭಾಗಿಯಾಗಿದ್ದರು. ಅಂತೂ ಲೋನ್ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರು ಇದೀಗ ಜೈಲು ಪಾಲಾಗಿದ್ದಾರೆ.
SureshBabu PubNext Yalahanka..
PublicNext
24/04/2022 08:47 pm