ನೆಲಮಂಗಲ: ಆತ ಮದುವೆಯಾಗಿ ಕೇವಲ ಒಂದೂವರೆ ವರ್ಷ ಮಾತ್ರ ಕಳೆದಿತ್ತು. ಹೊಸಬಾಳಲ್ಲಿ ಒಂದು ದಿನವೂ ಸುಖ ಸಂತೋಷವಾಗಿ ಇರಲಿಲ್ಲ. ಮದುವೆಯಾದ ಆರು ತಿಂಗಳಿಗೆ ಹೆತ್ತವರಿಂದ ಗಂಡ ಹೆಂಡ್ತಿ ದೂರಾನೆ ಇದ್ದರು. ಇದಕ್ಕಿದ್ದಂತೆ ಅವರ ಬಾಳಲ್ಲಿ ಏನಾಯ್ತೋ ಏನೋ ಇಂದು ಬೆಳಿಗ್ಗೆ ಹೆತ್ತಮ್ಮನಿಗೆ ಉಪಹಾರ ತಂದುಕೊಟ್ಟ ವಿಷ ಸೇವಿಸಿದ್ದೇನೆ ಅಮ್ಮಾ ಅಂತ ಹೇಳಿ, ಅಮ್ಮನ ಕೈಯಿಗೆ ಡೆತ್ ನೋಟ್ ಕೊಟ್ಟು ಕೊನೆಯುಸಿರೆಳೆದ್ದಿದ್ದಾನೆ.
ನನ್ನ ಜೊತೆ ಮಾತಾಡೋಕೆ ಇಷ್ಟ ಇಲ್ಲ ಅಂದ್ರೆ ಪರವಾಗಿಲ್ಲ, ನಾನು ನಿಮಗೆ ತೊಂದರೆ ಕೊಡಲ್ಲ.. ಎಲ್ಲೇ ಇರೀ, ಹೇಗೆ ಇರೀ ಸಂತೋಷವಾಗಿರಿ.. ನಂಗೆ ಅಷ್ಟೆ ಸಾಕು.. ಹೌದು ಸೋಷಿಯಲ್ ಮೀಡಿಯಾದಲ್ಲಿ ಹೀಗೊಂದು ಪೋಸ್ಟ್ ಹಾಕಿದ ಈತ ಕೆಲವೇ ನಿಮಿಷಗಳಲ್ಲಿ ಉಸಿರು ಚೆಲ್ಲಿದ್ದಾನೆ. ಈ ಫೋಟೋದಲ್ಲಿ ಕಾಣ್ತಿರೋ 33 ವರ್ಷದ ಗೋವಿಂದರಾಜು, ತನ್ನ ಹೆಂಡತಿಯ ಕಾಟ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸಾವಿಗೂ ಮುನ್ನಾ ಅಮ್ಮನ ಕೈಯಿಗೆ ಡೆತ್ ನೋಟ್ ಕೊಟ್ಟಿದ್ದು, ನನ್ನ ಸಾವಿಗೆ ನನ್ನ ಹೆಂಡತಿ ರಾಧ ಹಾಗೂ ಆಕೆಯ ಕುಟುಂಬಸ್ಥರೇ ಕಾರಣ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಕಿಸಿದ್ದಾನೆ.
ಮಾಗಡಿ ತಾಲ್ಲೂಕು ಕುದೂರು ಪೊಲಿಸ್ ಠಾಣಾ ವ್ಯಾಪ್ತಿಯ ಅರಸನಕುಂಟೆ ಗ್ರಾಮದ ನಿವಾಸಿಯಾಗಿದ್ದ ಗೋವಿಂದರಾಜು, ಕಳೆದೊಂದುವರೆ ವರ್ಷದ ಹಿಂದೆ ತಾನೇ ತನ್ನ ಮದುವೆ ಖರ್ಚನೆಲ್ಲಾ ನೋಡ್ಕೊಂಡು ರಾಧಳನ್ನ ಮದುವೆಯಾಗಿದ್ದ. ಆದ್ರೆ ಮದುವೆಯ ನಂತರದ ದಾಂಪತ್ಯ ಜೀವನ ಒಂದು ದಿನವೂ ಸುಖಮಯವಾಗಿರಲಿಲ್ಲವಂತೆ, ಮದುವೆಯಾದ ಆರು ತಿಂಗಳಿಗೆ ಹೆತ್ತವರನ್ನ ತೊರೆದು ಕುಣಿಗಲ್‌ನಲ್ಲಿ ಮನೆ ಮಾಡ್ಕೊಂಡಿದ್ರು. ಆದರೆ ಎಲ್ಲಿಗೋದ್ರು ಇವರಿಬ್ಬರ ಸಾಂಸರಿಕ ಜೀವನದಲ್ಲಿ ನೆಮ್ಮದಿ ಅನ್ನೋದೇ ಕಾಣ್ಲಿಲ್ವಂತೆ. ಗಂಡನೆ ಕಿರುಕುಳ ನೀಡ್ತಾನೆ ಅಂತ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಸಹ ದೂರು ಕೊಟ್ಟಿದ್ಲಂತೆ. ಈ ದೂರಿನ ಹಿನ್ನೆಲೆ ಮನನೊಂದು ತಾಯಿಯ ಬಳಿ ನೋವು ಹೇಳಿಕೊಳ್ಳಲು ಬಂದಿದ್ದವನು ವಿಷ ಸೇವಿಸಿ ತಾಯಿಯ ಮಡಿಲಲ್ಲೇ ಪ್ರಾಣ ಬಿಟ್ಟಿದ್ದಾನೆ.
ಒಟ್ಟಾರೆ ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೂ ಅನ್ನೋ ಗಾದೆ ಮಾತಿನಂತೆ ಇರಬೇಕಿದ್ದ ಗಂಡ ಹೆಂಡತಿ ಜಗಳ ನಿತ್ಯ ನಿರಂತರವಾಗಿದ್ದು, ಹೆಂಡತಿಯ ಕಿರುಕುಳದ ಆರೋಪಕ್ಕೆ ಮನನೊಂದ ಪತಿರಾಯ ವಿಷ ಸೇವಿಸಿ ತಾಯಿ ಮಡಿಲಲ್ಲಿ ಕೊನೆಯುಸಿರೆಳೆದಿದ್ದಾನೆ. ಈ ಸಂಬಂಧ ಕುದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
PublicNext
24/04/2022 01:13 pm