ನೆಲಮಂಗಲ: ಹೆದ್ದಾರಿ ರಸ್ತೆಯಲ್ಲಿ ಆಟೋ ಚಾಲಕನಿಗೆ ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಕು ತೋರಿಸಿ, ಬೆದರಿಸಿ ದರೋಡೆಗೈದ ಘಟನೆ ಬೆಂಗಳೂರು ಉತ್ತರ ತಾಲ್ಲೂಕು ರಾ. ಹೆದ್ದಾರಿ ತುಮಕೂರು ರಸ್ತೆಯಲ್ಲಿನ ಅಡಕಿಮಾರನಹಳ್ಳಿ ಬಳಿ ನೆಡೆದಿದೆ.
ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ರಾಜಣ್ಣ ಎಂಬುವರ ಆಟೋವನ್ನು ಅಡ್ಡಗಟ್ಟಿದ್ದಾರೆ. ಬಳಿಕ ರಾಜಣ್ಣ ಅವರ ಬಳಿ ಇದ್ದ ಸುಮಾರು ಒಂದು ಲಕ್ಷ ರೂ. ಮೌಲ್ಯದ ಮೊಬೈಲ್, ಉಂಗುರ, ನಗದು ಮತ್ತು ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
23/04/2022 10:33 pm