ಬೆಂಗಳೂರು: ಬಸವನಗುಡಿ ಮಹಿಳಾ ಪೊಲೀಸರು ಪತ್ತೆ ಮಾಡಿದ್ದ ಬಾಡಿಗೆ ತಾಯಿ ಜಾಲ ಪ್ರಕರಣದಲ್ಲಿ ಮತ್ತೋರ್ವ ಮಹಿಳಾ ಆರೋಪಿ ಬಂಧನವಾಗಿದೆ.
ಕಳೆದ 2020ರಲ್ಲಿ ಚಾಮರಾಜಪೇಟೆ ಹೆರಿಗೆ ಆಸ್ಪತ್ರೆಯಿಂದ ನವಜಾತ ಶಿಶು ಕಳ್ಳತನವಾಗಿತ್ತು. ಈ ಪ್ರಕರಣದಲ್ಲಿ ಒಂದು ವರ್ಷದ ಬಳಿಕ ಪೊಲೀಸರು ಮಗುವನ್ನು ಪತ್ತೆ ಮಾಡಿದ್ದರು. ವೈದ್ಯೆ ರಶ್ಮಿಯ ಜೊತೆಗೆ ಹಲವರನ್ನು ಬಂಧಿಸಿ ದೊಡ್ಡ ಜಾಲವನ್ನೇ ಬೆಂಗಳೂರು ದಕ್ಷಿಣ ವಿಭಾಗ ಪೊಲೀಸರು ಪತ್ತೆ ಮಾಡಿದ್ದರು.
ಸದ್ಯ ತಲೆಮರೆಸಿಕೊಂಡಿದ್ದ ಭಾನುಮತಿ ಎಂಬ ಆರೋಪಿಯನ್ನು ಬಸವನಗುಡಿ ಮಹಿಳಾ ಪೊಲೀಸರು ಬಂಧಿಸಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿದ್ದ ಭಾನುಮತಿ ಬಂಧಿ ಆರೋಪಿಯಾಗಿದ್ದು, ಮಕ್ಕಳ ಕಳ್ಳತನ ಪ್ರಕರಣದ ಆರೋಪಿಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪದಡಿ ಅವರನ್ನು ಬಂಧಿಸಲಾಗಿದೆ.
Kshetra Samachara
23/04/2022 04:49 pm