ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ: ಎಲ್ಲಾ ಅನುಮಾನಗಳಿಗೂ ಇತಿಶ್ರೀ ಹಾಡಿದ ಪೊಲೀಸರು

ಬೆಂಗಳೂರು: ನಗರದ ಪ್ರತಿಷ್ಠಿತ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಪ್ರಕರಣವನ್ನ ಬೆಂಗಳೂರು ಪೊಲೀಸ್ರು ಒಂದು ಹಂತಕ್ಕೆ ಭೇದಿಸಿದ್ದಾರೆ. ಇ-ಮೇಲ್ ಕೃತ್ಯದ ಹಿಂದಿರುವ ಮಾಸ್ಟರ್ ಮೈಂಡ್ ಯಾರು.? ಎಲ್ಲಿಂದ ಮಾಡಿದ್ರು ಎಂಬುದರ ಬಗ್ಗೆ ಬಹುತೇಕ ಮಾಹಿತಿ ಕಲೆ ಹಾಕಿದ್ದಾರೆ. ಮೊದಲಿಗೆ ಯಾರೋ ಕಿಡಿಗೇಡಿಗಳು ಮಾಡಿರುವ ಅನುಮಾನ ವ್ಯಕ್ತವಾಗಿತ್ತು. ಇದ್ರ ಜೊತೆಗೆ ವಿದ್ಯಾರ್ಥಿಯೋರ್ವನ ಅಣ್ಣನಿಂದ ಈ ಕೃತ್ಯ ನಡೆದಿದೆ ಎಂದು ಹೇಳಲಾಗ್ತಿತ್ತು, ಸದ್ಯ ಈ ಎಲ್ಲಾ ಅನುಮಾನಕ್ಕೂ ನಗರ ಪೊಲೀಸ್ರು ಇತಿ ಶ್ರೀ ಹಾಡಿದ್ದಾರೆ.

ಅಸಲಿಗೆ ಆ ಒಂದು ರಾಷ್ಟ್ರದಲ್ಲಿಂದ ಬಂದಿತ್ತು ಮೇಲ್ ಸಂದೇಶ. ಏಪ್ರಿಲ್ 8 ರಂದು ನಡೆದಿದ್ದ ಕೃತ್ಯದ ಹಿಂದಿನ ಕಿಡಿಗೇಡಿಗಳ ಜಾಡು ಹುಡುಕಿದ್ರು ಬೆಂಗಳೂರು ಪೊಲೀಸರು. ಸರ್ವರ್ ಗಳ ಪರಿಶೀಲನೆ ವೇಳೆ ಸ್ಫೋಟಕ ಸಂಗತಿ ಬೆಳಕಿಗೆ ಬಂದಿದೆ. ಪಶ್ಚಿಮ ದಿಕ್ಕಿನ ಆ ಒಂದು ರಾಷ್ಟ್ರದಿಂದ ಕಿಡಿಗೇಡಿ ಕೃತ್ಯವೆಸಗಿರೋದು ಪೊಲೀಸರಿಗೆ ಟೆಕ್ನಿಕಲ್ ದಾಖಲೆ ಮೂಲಕ ಕನ್ಪರ್ಮ್ ಆಗಿದೆ. ಶಾಲೆಗಳಿಗೆ ಮೇಲ್ ನ ಐಪಿ ಅಡ್ರಸ್ ಆಧರಿಸಿ ಗೂಗಲ್ ನಿಂದ ಮಾಹಿತಿ ತರಿಸಿಕೊಂಡಿದ್ದ ಪೊಲೀಸರು ಐಪಿ ಅಡ್ರೆಸ್ ಪತ್ತೆ ಮಾಡಿದ್ದಾರೆ. ಇನ್ನೂ ವಿದೇಶಿ ಸರ್ವರ್ ಹ್ಯಾಕ್ ಮಾಡಿ ಸ್ಥಳೀಯರೇ ಮೇಲ್ ಮಾಡಿರುವ ಅನುಮಾನವನ್ನ ಪೊಲೀಸ್ರು ಬಗೆಹರಿಸಿದ್ದಾರೆ. ಹೊರ ದೇಶದಿಂದಲೇ ಮೇಲ್ ಬಂದಿರೋದು ಕನ್ಫರ್ಮ್ ಆಗಿದೆ‌.

Edited By : Shivu K
PublicNext

PublicNext

23/04/2022 02:04 pm

Cinque Terre

39.94 K

Cinque Terre

0

ಸಂಬಂಧಿತ ಸುದ್ದಿ