ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ದೇವಸ್ಥಾನ ಮತ್ತು ಆರ್ಚಕರ ಮನೆಗೆ ಕನ್ನ: 2.5 ಕೆಜಿ ಬೆಳ್ಳಿ, 95 ಸಾವಿರ ನಗದು ಕಳ್ಳತನ

ದೊಡ್ಡಬಳ್ಳಾಪುರ: ಮದುವೆ ಲಗ್ನ ಪತ್ರಿಕೆ ಹಂಚಲು ಸಂಬಂಧಿಕರ ಮನೆಗೆ ತೆರಳಿದ ಆರ್ಚಕ ಮನೆ ಮತ್ತು ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಹುಂಡಿ ಹಣ ಮತ್ತು ಮನೆಯಲ್ಲಿದ್ದ 2.5 ಕೆಜಿ ಬೆಳ್ಳಿ ಗಟ್ಟಿ, 95 ಸಾವಿರ ನಗದು ಹಣದೊಂದಿಗೆ ಪರಾರಿಯಾಗಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಆಲಹಳ್ಳಿಯ ಆಂಜನೇಯ ದೇವಸ್ಥಾನ ಹಾಗೂ ದೇಗುಲದ ಅರ್ಚಕರ ಮನೆಯಲ್ಲಿ ಗುರುವಾರ ರಾತ್ರಿ ಕಳವು ನಡೆದಿದೆ. ದೇವಸ್ಥಾನದ ಬಾಗಿಲು ಹೊಡೆದು ಒಳ ನುಗ್ಗಿರುವ ಕಳ್ಳರು‌ ಹುಂಡಿ‌ ಹೊತ್ತೊಯ್ದಿದ್ದಾರೆ. ದೇವಸ್ಥಾನದ ಪಕ್ಕದಲ್ಲೇ ಇದ್ದ ಅರ್ಚಕರ ಮನೆಯಲ್ಲಿ 2.5 ಕೆ.ಜಿ.ತೂಕದ ಬೆಳ್ಳಿ ಗಟ್ಟಿ, ದೇವರ ಚಿನ್ನದ ಪದಕ ಹಾಗೂ ಮನೆಯಲ್ಲಿಟ್ಟಿದ್ದ 95 ಸಾವಿರ ರೂ. ನಗದು ಕದ್ದೊಯ್ದಿದ್ದಾರೆ. ದೇವರ ಚಿನ್ನದ ಪದಕ ಹಾಗೂ ಬೆಳ್ಳಿಗಟ್ಟಿಯನ್ನು ಮನೆಯಲ್ಲೇ ಇಟ್ಟಿದ್ದರು.

ಗುರುವಾರ ಸಂಜೆ ಅರ್ಚಕರು ದೇವಸ್ಥಾನ ಹಾಗೂ ಮನೆಗೆ ಬೀಗ ಹಾಕಿಕೊಂಡು ಸೋದರಿಯ‌ ಮದುವೆ ನಿಮಿತ್ತ ಲಗ್ನಪತ್ರಿಕೆ ಹಂಚಲು ಮೈಸೂರಿಗೆ ಹೋಗಿದ್ದರು. ಅರ್ಚಕರ ಪತ್ನಿ ಕೂಡ ಬೆಂಗಳೂರಿಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು, ದೇವಸ್ಥಾನ ಹಾಗೂ‌ ಮನೆಯ ಬಾಗಿಲು ಹೊಡೆದು ಈ ಕೃತ್ಯ ಎಸಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈ‌ ಸಂಬಂಧ ಅರ್ಚಕ ಭಾರ್ಗವ್ ಅವರು ಪೊಲೀಸರಿಗೆ ದೂರು ನೀಡಿದ್ದು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿದರು. ಬೆರಳಚ್ಚು ತಜ್ಞರು ಕೂಡ ಸಾಕ್ಷ್ಯಾಧಾರ ಕಲೆ ಹಾಕುತ್ತಿದ್ದಾರೆ.

Edited By : Nagaraj Tulugeri
PublicNext

PublicNext

22/04/2022 04:48 pm

Cinque Terre

24.6 K

Cinque Terre

1

ಸಂಬಂಧಿತ ಸುದ್ದಿ