ಬೆಂಗಳೂರು: 545 ಪಿಎಸ್ಐ ಆಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಪ್ರಕರಣ ಸಂಬಂಧ ಇಂದು 50 ಅಭ್ಯರ್ತಿಗಳಿಗೆ ಸಿಐಡಿ ನೋಟೀಸ್ ನೀಡಿತ್ತು. ಆದ್ರೆ ನೋಟೀಸ್ ನೀಡಿದ್ದ 50 ಆಭ್ಯರ್ಥಿಗಳ ಪೈಕಿ 45 ಮಂದಿ ಮಾತ್ರ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧ ಸಾಕಷ್ಟು ಅಕ್ರಮ ನಡೆದಿದೆ ಎಂದು ಮೇಲ್ನೊಟಕ್ಕೆ ಕಂಡು ಬಂದಿದೆ. ಕೇವಲ ಕಲಬುರಗಿ ಅಷ್ಟೇ ಅಲ್ಲದೇ ರಾಜ್ಯದ ಹಲವು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಕಳೆದ ಬಾರಿ 545 ಅಭ್ಯರ್ಥಿಗಳ ಪೈಕಿ ಟಾಪರ್ಸ್ ಆಗಿದ್ದ 50 ಅಭ್ಯರ್ಥಿಗಳಿಗೆ ಸಿಐಡಿ ನೋಟೀಸ್ ಜಾರಿ ಮಾಡಿತ್ತು. ಈಗಾಗಲೇ 45 ಅಭ್ಯರ್ಥಿಗಳು ವಿಚಾರಣೆ ಎದುರಿಸಿದ್ದಾರೆ. ಉಳಿದ 5 ಅಭ್ಯರ್ಥಿಗಳ ಪೈಕಿ ಮೂವರು ಅನುಮತಿ ಪಡೆದಿದ್ದು ಇನ್ನೂಬ್ಬರು ಯಾವುದೇ ಅನುಮತಿ ಪಡೆಯದೆ ವಿಚಾರಣೆಗೆ ಗೈರಾಗಿದ್ದಾರೆ.
ಡಿವೈಎಸ್ಪಿ ನರಸಿಂಹಮೂರ್ತಿ ನೇತೃತ್ವದಲ್ಲಿ ಇಂದು 45 ಅಭ್ಯರ್ಥಿಗಳ ತೀವ್ರ ವಿಚಾರಣೆ ನಡೆಸಲಾಗಿದೆ. ಇನ್ನುಳಿದ ಐವರು ಅಭ್ಯರ್ಥಿಗಳು ಗೈರು ಹಾಜರಾಗಿದ್ದು ಅನುಮಾನ ಮೂಡಿಸಿದೆ. ಅಭ್ಯರ್ಥಿಗಳ ತಂದಿರುವ ಒಎಂಆರ್ ಶೀಟ್ ಗಳಿಗೂ ಈಗಾಗಲೇ ಕೆಪಿಎಸ್ಸಿ ಯಿಂದ ಪಡೆದ ಮೂಲ ಒಎಂಆರ್ ಶೀಟ್ ಗಳಿಗೆ ಹೋಲಿಕೆ ಮಾಡಲಾಗುತ್ತಿದೆ.ಬೆಂಗಳೂರಿನ ಪರೀಕ್ಷಾ ಕೇಂದ್ರ ಒಂದರಲ್ಲಿ ಪರೀಕ್ಷೆ ಬರೆದು ಆಯ್ಕೆಯಾಗಿರುವ ಅಭ್ಯರ್ಥಿಗಳಿಗಷ್ಟೇ ನೋಟೀಸ್ ನೀಡಲಾಗಿತ್ತು.
ಪ್ರತಿ ಅಭ್ಯರ್ಥಿಗಳ ವಿಚಾರಣೆಯನ್ನು ವಿಡಿಯೋ ರೆಕಾರ್ಡ್ ಮಾಡಿಸಿಲಾಗಿದೆ.
PublicNext
20/04/2022 10:01 pm