ನೆಲಮಂಗಲ: ಆನ್ ಲೈನ್ ಬೆಟ್ಟಿಂಗ್ ದಂಧೆ, ಜೂಜಿನ ಜಾಲ ಸಿಲುಕಿದ ಬಹಳಷ್ಟು ಜನ್ರು ಜೀವನ ಬೀದಿಗೆ ಬಿದ್ದಿದೆ, ಇಂತಹದ್ದೆ ಆನ್ ಲೈನ್ ಬೆಟ್ಟಿಂಗ್ ಬಿದ್ದು ಸಾಲದ ಶೂಲಕ್ಕೆ ಸಿಲುಕಿ ಸಾಲ ತೀರಿಸಲಾಗದೇ ಒತ್ತಡಕ್ಕೆ ಬೇಸತ್ತ ಸಾಫ್ಟ್‌ವೇರ್ ಎಂಜಿನಿಯರ್ ಬಲಿಯಾಗಿದ್ದಾನೆ.
ಈತ 28 ವರ್ಷದ ಭರತ್ ಅಂತ ಒಳ್ಳೆ ಪ್ರೊಫೈಲ್ ಹೊಂದಿರೋ ಸಾಫ್ಟ್‌ವೇರ್ ಎಂಜಿನಿಯರ್. ಮೂಲತಃ ಬೆಂ. ಉತ್ತರ ತಾಲೂಕು ಮಾದವಾರ ನಿವಾಸಿಯಾಗಿರೋ ಭರತ್ ನ ತಂದೆ ಚಿಕ್ಕ ವಯಸ್ಸಿನಲ್ಲಿಯೇ ಮೃತರಾಗಿದ್ರು. ಆದ್ರೆ ತಾಯಿ ಕೈಬಿಡದೇ ಕೂಲಿ ನಾಲಿ ಮಾಡಿ ಸಾಫ್ಟ್‌ವೇರ್ ಎಂಜಿನಿಯರ್ ಮಾಡ್ಸಿದ್ರು. ಓದಿಗೆ ತಕ್ಕನಾಗಿ ಕೆಲ್ಸಾನು ಸಿಕ್ಕಿ ವರ್ಕ್ ಎಟ್ ಹೋಂ ನಿಂದಲೇ ಕೈತುಂಬಾ ಸಂಬಳ ಬರ್ತಿತ್ತು. ಇನ್ನೇನು ಮದುವೆ ಮಾಡಿ ಜೀವನ ಕಟ್ಕೊಬೇಕಿತ್ತು.
ಅದ್ರೆ ಆತನನ್ನ ಆನ್ ಲೈನ್ ಬೆಡ್ಡಿಂಗ್ ಭೂತ ಆವರಿಸಿತ್ತು. ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಸೋತು ಸುಣ್ಣವಾಗಿದ್ದ ಈತ ಸಾಲದ ಶೂಲಕ್ಕೆ ಬೇಸತ್ತು, ಡೆತ್ ನೋಟ್ ಬರೆದಿಟ್ಟು ತನ್ನ ತಾಯಿಯ ಸೀರಿಯೆಂದಲೇ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಭರತ್ ಕಳೆದ 5-6 ವರ್ಷಗಳಿಂದ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಬೆಟ್ಟಿಂಗ್ ಭೂತದ ಬಲೆಯಲ್ಲಿ ಬಿದ್ದಿದ್ದ ಭರತ್ ತಾನೂ ಕೂಡಿಟ್ಟಿದ್ದ ಹಣವನ್ನೆಲ್ಲ ಬೆಟ್ಟಿಂಗ್ ದಂಧೆಗೆ ಸುರಿದು ಕೈಸಾಲ ಮಾಡಿ ಕೊಂಡಿದ್ದ. ಆದ್ರೆ ಈತನಿಗೆ ಮೆಟ್ಟಿಕೊಂಡಿದ್ದ ಬೆಟ್ಟಿಂಗ್ ಭೂತ ಮಾತ್ರ ಬೆಂಬಿಡದೆ ಬೇತಾಳದಂತೆ ಕಾಡುತ್ತಿತು. ಬೆಟ್ಟಿಂಗ್‌ನಲ್ಲಿ ಹೂಡಿಕೆಗಾಗಿ ಆನ್‌ಲೈನ್‌ನಲ್ಲಿ ಇನ್ಸ್ಟಾಂಟ್ ಲೋನ್ ತೆಗೆದುಕೊಳ್ಳಲು ಶುರುಮಾಡಿದ್ದ ಇವನು ಆ್ಯಪ್ಗಳಲ್ಲಿ ಇಸ್ಟಾಂಟ್ ಲೋನ್ ತೆಗೆದುಕೊಂಡು ಸಾಲ ಕೊಟ್ಟವರ ಕಾಟಕ್ಕೆ ಸಿಲುಕಿದ್ದ ಎನ್ನಲಾಗಿದೆ.
ಆನ್‌ಲೈನ್ ಲೋನ್ ನೀಡೋರು ಆತನ ಕಾಂಟ್ಯಾಕ್ಟ್ ನಂಬರ್‌ಗೆ ಕರೆ ಮಾಡಿ ಮರ್ಯಾದೆ ತೆಗೆಯಬಹುದು ಎಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದು ಪೊಲೀಸರ ಊಹೆ ಆಗಿದ್ರೆ, ಭರತ್ ಏಕೆ ಆತ್ಮಹತ್ಯೆ ಮಾಡಿಕೊಂಡ ಎಂಬುದು ಅವರ ಕುಟುಂಬಸ್ಥರಿಗೆ ಮಾತ್ರ ತಿಳಿದಿಲ್ಲವಂತೆ.
PublicNext
20/04/2022 11:36 am