ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸ್ಕೆಚ್ ಮಿಸ್ ಆಗಿ ಹೊಡೆಯೋಕೆ ಬಂದವನಿಗೆ ಚಾಕು ಇರಿತ

ಬೆಂಗಳೂರು: ಅಟ್ಯಾಕ್ ಮಾಡಲು ಬಂದವರಿಗೆ ಚಾಕು ಇರಿದ‌ ಘಟನೆ ನಗರದ ಹೆಗ್ಗನಹಳ್ಳಿ ಕ್ರಾಸ್ ಬಳಿ ನಡೆದಿದೆ. ಸೂರಿ ಚಾಕು ಇರಿತಕ್ಕೊಳಗಾದ ಯುವಕ.

ಸೂರಿ ಸ್ನೇಹಿತ, ಮುನಿ ಜೊತೆ ಕಿರಿಕ್‌ ಮಾಡಿಕೊಂಡಿದ್ದ. ಜಸ್ಟ್ ಗುರಿಯಾಗಿಸಿದ್ದ ಅನ್ನೋ ಕಾರಣಕ್ಕೆ ಕಿರಿಕ್ ಮಾಡಿಕೊಂಡು ನಾನೂ ಇದೇ ಏರಿಯಾದವನೇ‌ ಸೂರಿ ಗೊತ್ತಾ, ಸೂರಿ ಬರ್ತಾನೆ‌ ಇರು ಅಂತ ಜಗಳ ಮಾಡಿ ಮತ್ತೆ ಸ್ವಲ್ಪ‌ ಸಮಯದ ನಂತರ ಸೂರಿನ ಕರೆಸಿ ಮುನಿ‌ ಮುಂದೆ ಇಲ್ಸಿರ್ತಾನೆ.‌ ಈ ವೇಳೆ ಜಗಳ ಕೈ ಕೈ ಮಿಲಾಯಿಸೋ ಹಂತಕ್ಕೆ ಹೋದಾಗ ಸೂರಿ ಡ್ರ್ಯಾಗರ್ ಹಿಡಿದು ಮುನಿಗೆ ಹೊಡೆಯಲು ಮುಂದಾದಾಗ ಅದೇ ಡ್ರ್ಯಾಗರ್ ನಿಂದ ಮುನಿ ಸೂರಿಗೆ ಚುಚ್ಚಿದ್ದಾನೆ.‌

ಸದ್ಯ ಘಟನೆ ಹಿನ್ನೆಲೆಯಲ್ಲಿ ರಾಜಗೋಪಾಲ ನಗರ ಪೊಲೀಸರು ಕೇಸ್ ದಾಖಲಿಸಿಕೊಂಡು ಮುನಿಯನ್ನ ಬಂಧಿಸಿದ್ದಾರೆ. ಮುನಿ ಈ ಹಿಂದೆ‌ ಇದೇ ರೀತಿಯ ಕೊಲೆ ಯತ್ನ ಕೇಸ್ ನಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿದ್ದ.

Edited By : Shivu K
PublicNext

PublicNext

19/04/2022 08:57 am

Cinque Terre

58.23 K

Cinque Terre

0

ಸಂಬಂಧಿತ ಸುದ್ದಿ