ಬೊಮ್ಮನಹಳ್ಳಿ: ಬೆಸ್ಕಾಂ ಅಧಿಕಾರಿಯೋರ್ವ 20 ಸಾವಿರ ರೂ. ಲಂಚ ಸ್ವೀಕಾರ ಮಾಡುವಾಗ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಸಿಕ್ಕಿಬಿದ್ದಿದ್ದಾರೆ.
ನವೀನ್ ಡಿ ಸಹಾಯಕ ಅಭಿಯಂತರರು ಎಸಿಬಿ ದಾಳಿಗೆ ಒಳಗಾದವರು. ಬೆಂಗಳೂರು ನಗರದ ಬೆಳ್ಳಂದೂರು ನಿವಾಸಿ ವಿದ್ಯುತ್ ಗುತ್ತಿಗೆದಾರರೊಬ್ಬರು ವಿದ್ಯುತ್ ಕೆಲಸದ ಸಂಬಂಧ ಗುತ್ತಿಗೆ ಪಡೆದಿರುವ ಬೆಳಗೆರೆ ರಸ್ತೆಯಲ್ಲಿ ಇರುವ ವರ್ತೂರು ಬಡಾವಣೆ 280 ಕೆವಿ ಸಾಮರ್ಥ್ಯದ ವಿದ್ಯುತ್ ಟ್ರಾನ್ಸ್ ಫಾರ್ಮ್ ಚಾಲನೆಗೊಳಿಸುವ ಸಲುವಾಗಿ ಬೆಸ್ಕಾಂ ಕಚೇರಿ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ನವೀನ್ ಸಾಯಕ ಅಭಿಯಂತರರು ವಿದ್ಯುತ್ ಟ್ರಾನ್ಸ್ಫರ್ ಚಾಲನೆ ಮಾಡಿಕೊಡಲು 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಮುಂಗಡವಾಗಿ 20 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇನ್ನು ಆರೋಪಿಯಿಂದ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
Kshetra Samachara
18/04/2022 10:47 pm