ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅತ್ತಿಬೆಲೆ ಆರ್ ಟಿ ಓ ಕಚೇರಿಯಲ್ಲಿ ಅಕ್ರಮ,ಪ್ರತಿ ವಾಹನಕ್ಕೆ ನೂರು ರೂಪಾಯಿ ಲಂಚ ಆರೋಪ

ಆನೇಕಲ್ : ಕರ್ನಾಟಕ ರಾಷ್ಟ್ರೀಯ ಪಕ್ಷದ ವತಿಯಿಂದ ಭ್ರಷ್ಟ ಮುಕ್ತ ಕರ್ನಾಟಕ ಅಂತ ಪ್ರತಿ ಶುಕ್ರವಾರದಂದು ಒಂದೊಂದು ಭಾಗದಲ್ಲಿ ಸಾರ್ವಜನಿಕರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು,ಅದರ ಮುಂದುವರಿದ ಭಾಗವಾಗಿ ಇವತ್ತು ಅತ್ತಿಬೆಲೆ ಸಮೀಪವಿರುವ ಆರ್ ಟಿ ಓ ಕಚೇರಿಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಇನ್ನು ಇದೇ ವೇಳೆ ಕೆ.ಆರ್. ಎಸ್ ಕಾರ್ಯಕರ್ತರೊಬ್ಬರು ಸಾಮಾಜಿಕ ಜಾಲತಾಣದ ಫೇಸ್ಬುಕ್ ಮುಖಾಂತರ ಅತ್ತಿಬೆಲೆ ಆರ್ ಟಿ ಓ ಕಚೇರಿಯಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅತ್ತಿಬೆಲೆ ಆರ್ ಟಿ ಓ ಕಚೇರಿಯಲ್ಲಿ ಪ್ರತಿ ವಾಹನಕ್ಕೂ ನೂರು ರೂಪಾಯಿ ಲಂಚ ಕೊಡಬೇಕು ಅನ್ನೋದರ ಬಗ್ಗೆ ಮೊಬೈಲ್ ವಿಡಿಯೋ ತುಣುಕು ಸಾಕಷ್ಟು ಸದ್ದು ಮಾಡುತ್ತಿದ್ದು, ಈಗ ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Edited By : Manjunath H D
PublicNext

PublicNext

15/04/2022 07:19 pm

Cinque Terre

32.99 K

Cinque Terre

1

ಸಂಬಂಧಿತ ಸುದ್ದಿ