ಬೆಂಗಳೂರು: ನೀವು ವಿಮಾನದಲ್ಲಿ ಪ್ರಯಾಣಿಸಿ ನಿಮ್ಮ ಮನೆಗೆ ಹಿಂತಿರುಗಿದಾಗ ನಿಮ್ಮದಲ್ಲದ ಲಗೇಜ್ ನೀವು ಪಡೆದುಕೊಂಡಿದ್ದೀರಿ ಅಂತ ನಿಮಗೆ ತಿಳಿಯುತ್ತದೆ. ಇದನ್ನು ತಿಳಿದುಕೊಂಡ ನಂತರ ನೀವು ಏರ್‌ಲೈನ್‌ಗೆ ಕರೆ ಮಾಡಲು ಪ್ರಾರಂಭಿಸುತ್ತೀರಿ. ಆದರೆ ಅವರು ನಿಮಗೆ ಉತ್ತರಿಸುವುದಿಲ್ಲ.
ಬೆಂಗಳೂರಿನ ವ್ಯಕ್ತಿಯೊಬ್ಬನಿಗೂ ಹೀಗಾಗಿತ್ತು. ಹೀಗಾಗಿ ಆ ವ್ಯಕ್ತಿ ಮಾಡಿದ್ದೇನು ಅಂತ ಗೊತ್ತಾದರೆ ಶಾಕ್ ಆಗುತ್ತೀರಿ.
ಇಂಡಿಗೋ ವಿಮಾನದಲ್ಲಿ ಪಾಟ್ನಾದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ನಂದನ್ ಕುಮಾರ್ ಬೆಂಗಳೂರಿಗೆ ತಲುಪಿ ಲಗೇಜ್ ತೆಗೆದುಕೊಂಡು ಹೋದರು. ಆದರೆ ಮನೆಗೆ ತಲುಪಿದ ನಂತರ ಲಗೇಜ್ ಅವರದಲ್ಲ ಎಂದು ಗೊತ್ತಾಗುತ್ತೆ.
ತಕ್ಷಣವೇ ಅವರು ಇಂಡಿಗೋ ಏರ್‌ಲೈನ್ಸ್‌ಗೆ ಕರೆ ಮಾಡಲು ಪ್ರಾರಂಭಿಸುತ್ತಾರೆ. ಆದರೆ ಇಂಡಿಗೋ ಏರ್‌ಲೈನ್ ಸಿಬ್ಬಂದಿ ಪ್ರತಿಕ್ರಿಯಿಸುವುದಿಲ್ಲ. ನಂದನ್ ಕುಮಾರ್ ಬೆಳಗಿನವರೆಗೂ ಕಾದು ಕುಳಿತರೂ ಇಂಡಿಗೋ ಸಿಬ್ಬಂದಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆದರೆ ನಂದನ್ ಕುಮಾರ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರಿಂದ ಇಂಡಿಗೋ ವೆಬ್‌ಸೈಟ್‌ಅನ್ನೇ ಹ್ಯಾಕ್ ಮಾಡಿದ್ದಾರೆ. ಮತ್ತು ಪ್ರಯಾಣಿಕರ ವಿವರಗಳನ್ನು ತೆಗೆದುಕೊಂಡಾಗ ಕೊನೆಗೂ ನಂದನ್ ಕುಮಾರ್ ಅವರಿಗೆ ತಮ್ಮ ಲಗೇಜ್ ಸಿಕ್ಕಿದೆ.
Exclusive ಹಾಗಿ ನಂದನ್ ಕುಮಾರ್ ಪಬ್ಲಿಕ್ ನೆಕ್ಸ್ಟ್ ಗೇ ಮಾತನಾಡಿದ್ದಾರೆ
ನಂದನ್ ಕುಮಾರ್ ಈಗ ಸೋಷಿಯಲ್ ಮೀಡಿಯಾ ಟ್ರೆಂಡ್ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಮೇಲೆ ಮೀಮ್ಸ್ ಶುರುವಾಗಿದೆ. ಶೀಘ್ರದಲ್ಲೇ ಇಂಡಿಗೋ ತಮ್ಮ ವೆಬ್‌ಸೈಟ್ ಅನ್ನು ಸುರಕ್ಷಿತಗೊಳಿಸಬೇಕಿದೆ.
-ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು.
PublicNext
14/04/2022 12:30 pm