ಬೆಂಗಳೂರು: ಇದು ಬೆಂಗಳೂರಿನ ಪ್ರತಿಷ್ಟಿತ ಏರಿಯಾವಾದ ಸದಾಶಿವನಗರದಲ್ಲಿ ಬೆಳಕಿಗೆ ಬಂದಿರೋ ಪ್ರಕರಣ. ನಿವೃತ್ತ ಚೀಫ್ ಇಂಜಿನಿಯರ್ ನನ್ನು ನೋಡಿಕೊಳ್ತೀವಿ ಅಂತ ಕೇರ್ ಟೇಕರ್ ಮಹಿಳೆಯೊಬ್ಬರು ವಿಷಪ್ರಾಷನ ಮಾಡಿಸಿದ್ದಾರೆ ಅಂತ ಗಂಭೀರವಾಗಿ ಆರೋಪಿಸಲಾಗಿದೆ.
ಧನಮಣಿ ಎಂಬುವರು ಕಾಫಿಯಲ್ಲಿ ಸ್ಲೋ ಪಾಯ್ಸನ್ ನೀಡಿ ಕೊಲೆ ಯತ್ನ ನಡೆಸಿದ್ದಾರೆಂದು ಮಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮನೆ ಯಜಮಾನ ಶಿವಲಿಂಗಯ್ಯ ಮೂಲತ: ಮಂಡ್ಯದವ್ರು. ವೃತ್ತಿಯಲ್ಲಿ ಇಂಜಿನಿಯರಾಗಿ, ಚೀಪ್ ಇಂಜಿನಿಯರಾಗಿ ನಿವೃತ್ತಿ ಪಡೆದಿದ್ದಾರೆ. ಇನ್ನು ನಿವೃತ್ತಿ ಬಳಿಕ ಆನಂದ ಸೋಷಿಯಲ್ ಎಜ್ಯುಕೇಷನ್ ಟ್ರಸ್ಟ್ ನ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿರುವ ಶಿವಲಿಂಗಯ್ಯ ಈ ಟ್ರಸ್ಟ್ ನ ಮುಖಾಂತರ ಅಂಬೇಡ್ಕರ್ ಡೆಂಟಲ್ ಕಾಲೇಜು,ಎಜ್ಯುಕೇಷನ್ ಫೌಂಡರ್ ಆಗಿದ್ರು . ಇದರ ನಡುವೆ ಅಂದ್ರೆ 15 ವರ್ಷಗಳ ಹಿಂದೆ ಶಿವಲಿಂಗಯ್ಯನವ್ರ ಪತ್ನಿ ಸಾವನ್ನಪ್ಪಿದ್ದು, ಇವ್ರನ್ನ ನೋಡಿಕೊಳ್ಳೋ ಸಲುವಾಗಿ ಧನಮಣಿ ಎಂಬುವರು ಕೇರ್ ಟೇಕರ್ ಆಗಿ ಮನೆಗೆ ಬಂದಿದ್ರಂತೆ.ನಂತರ ಶಿವಲಿಂಗಯ್ಯನವರನ್ನ ವಿವಾಹವಾಗಿರೋದಾಗಿ ದಾಖಲೆಗಳನ್ನ ರೆಡಿಮಾಡಿಸಿಕೊಂಡು ಎರಡನೆ ಪತ್ನಿಎಂದು ಹೇಳಿಕೊಳ್ತಿದ್ದಾರಂತೆ.
ಈ ನಡುವೆ ಶಿವಲಿಂಗಯ್ಯ ಮಗನಾದ ಡಾಕ್ಟರ್ ರವಿ ಪ್ರಕಾಶ್ ರವರು, ಶಿವಲಿಂಗಯ್ಯನವರನ್ನ ಸಾಯಿಸೋದಕ್ಕೆ ಕಾಫಿಯಲ್ಲಿ ಸ್ಲೊ ಪಾಯಿಸನ್ ಕೊಡ್ತಿದ್ರು ಅಂತ ಆರೋಪಿಸಿದ್ದಾರೆ.
ಇತ್ತೀಚೆಗೆ ಅನಾರೋಗ್ಯಕ್ಕೊಳಾಗಿದ್ದ ಶಿವಲಿಂಗಯ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿದ ವೇಳೆ ಈ ಅಂಶ ವೈದ್ಯಕೀಯ ವರದಿಯಿಂದ ಬೆಳಕಿಗೆ ಬಂದಿದೆ ಎಂದು ಮಗ ಶಿವಪ್ರಕಾಶ್ ಹೇಳಿದ್ದಾರೆ. ಇನ್ನು ಸ್ವತ: ಡಾಕ್ಟರ್ ಆಗಿರುವ ಶಿವಲಿಂಗಯ್ಯನವರ ಪುತ್ರರಾಗಿರುವ ರವಿ ಪ್ರಕಾಶ್ ಲ್ಯಾಬ್ ರಿಪೋರ್ಟ್ ಗಳನ್ನ ಪರಿಶೀಲಿಸಿದ ವೇಳೆ ಶಿವಲಿಂಗಯ್ಯನವರ ದೇಹದಲ್ಲಿ ಅಲ್ಯೂಮಿನಿಯಂ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿರೋದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಹೀಗಾಗಿ ನಮ್ಮ ತಂದೆ ಶಿವಲಿಂಗಯ್ಯನವರನ್ನ ಸಾಯಿಸಿ, ಆಸ್ತಿ ಕಬಳಿಸೋ ಪ್ರಯತ್ನವನ್ನ ಅವ್ರ ಕೇರ್ ಟೇಕರ್ ಆದ ಧನಮಣಿ ಹಾಗೂ ಅವ್ರ ಪಿಎ ವೆಂಕಟೇಶ್ ಮೂರ್ತಿ ಎಂಬುವರ ಮೇಲೆ ಸದಾಶಿವನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸದಾಶಿವನಗರ ಠಾಣೆ ಪೊಲೀಸ್ರು ಡಾಕ್ಟರ್ ರವಿ ಪ್ರಕಾಶ್ ದೂರಿನೊಂದಿಗೆ ಸಲ್ಲಿಸಿರುವ ಲ್ಯಾಬ್ ರಿಪೋರ್ಟ್ ಗಳನ್ನ ಎಫ್ಎಸ್ಎಲ್ ಗೆ ರವಾನಿಸಿದ್ದಾರೆ. ಎಫ್ ಎಸ್ ಎಲ್ ರಿಪೋರ್ಟ್ ನಲ್ಲಿ ವಿಷಪ್ರಾಶನ ಕಂಡು ಬಂದ್ರೆ ಧನಮಣಿ ಹಾಗೂ ವೆಂಕಟೇಶಮೂರ್ತಿಯನ್ನ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ
PublicNext
11/04/2022 10:07 pm