ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ಮೂರು ತಿಂಗಳ ಹಿಂದಷ್ಟೇ ಲೋಕಾರ್ಪಣೆಗೊಂಡ ನೂತನ ಚೌಡೇಶ್ವರಿ ದೇವಸ್ಥಾನದಲ್ಲಿ ಹುಂಡಿ ಕಳವು ಮಾಡಲಾಗಿದೆ. ದೇವಸ್ಥಾನದ ಬಾಗಿಲು ಮೀಟಿ ಒಳಗೆ ನುಗ್ಗಿದ ಕಳ್ಳರು ಹುಂಡಿ ಒಡೆದು, ಅದರಲ್ಲಿದ್ದ ಕಾಣಿಕೆ ಹಣ ದೋಚಿ ಪರಾರಿಯಾಗಿದ್ದಾರೆ.
ಶನಿವಾರ ಬೆಳಿಗ್ಗೆ ಎಂದಿನಂತೆ ದೇವರ ಪೂಜೆ ಮಾಡಲು ಬಂದು ದೇವಸ್ಥಾನದ ಬಾಗಿಲು ತೆಗೆದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ದೇವಸ್ಥಾನ ಉದ್ಘಾಟನೆ ಆದಾಗಿನಿಂದ ಹುಂಡಿ ಹಣ ಎಣಿಕೆ ಮಾಡಿರಲಿಲ್ಲ. ಹುಂಡಿಯಲ್ಲಿ ಅಂದಾಜು 30ರಿಂದ 40 ಸಾವಿರ ರೂ. ಕಾಣಿಕೆ ಹಣ ಕಳ್ಳರ ಪಾಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
09/04/2022 07:35 pm