ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕದ್ದ ಮಾಂಗಲ್ಯ ಮರಳಿ ಮಾಲೀಕರಿಗೆ : ಆರೋಪಿ ಅರೆಸ್ಟ್

ದೊಡ್ಡಬಳ್ಳಾಪುರ : ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕನೊಬ್ಬ ಮನೆಯೊಂದರ ಬಾಗಿಲು ಮುರಿದು ಮಾಂಗಲ್ಯ ಸರ ಕದ್ದು ಮಣ್ಣಿನಲ್ಲಿ ಬಚ್ಚಿಟ್ಟಿದ್ದ, ಪ್ರಕರಣ ನಡೆದ 24 ಗಂಟೆಯಲ್ಲಿ ಕಳ್ಳನನ್ನ ಬಂಧಿಸಿದ ಪೊಲೀಸರು ಮಾಂಗಲ್ಯ ಸರವನ್ನ ಮಹಿಳೆಗೆ ಹಿಂದುರುಗಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಲಗುಮೇನಹಳ್ಳಿ ಕ್ರಾಸ್ ಬಳಿಯ ತೋಟದ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಮನೆಯ ಬಾಗಿಲು ಮುರಿದು ಮಾಂಗಲ್ಯ ಸರ ಕದ್ದು ಕಳ್ಳ ಪರಾರಿಯಾಗಿದ್ದ.ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ಮಾಗಡಿ ತಾಲೂಕಿನ ಕುದುರೆಗೆರೆ ಗ್ರಾಮದ ವೆಂಕಟೇಶ್ (41) ಬಂಧಿಸಲಾಗಿದೆ.

ಲಗುಮೇನಹಳ್ಳಿ ಕ್ರಾಸ್ ಬಳಿಯಲ್ಲಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್, ತೋಟದ ಸಮೀಪದಲ್ಲಿರುವ ಮನೆ ಬಾಗಿಲು ಮುರಿದು ಮಾಂಗಲ್ಯ ಸರ ಕಳವು ಮಾಡಿದ್ದು, ತೋಟದಲ್ಲಿನ ಮಣ್ಣಿನ ಗುಡ್ಡೆಯಲ್ಲಿ ಟವಲ್ ನಲ್ಲಿ ಬಚ್ಚಿಟ್ಟಿದ್ದ, ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡ ಇನ್ಸ್ ಪೆಕ್ಟರ್ ಸತೀಶ್ ನೇತೃತ್ವದ ಪೊಲೀಸರು ವಿಚಾರಣೆ ನಡೆಸಿ ಅನುಮಾನಸ್ಪದವಾಗಿ ವರ್ತಿಸಿದ ಕಾರಣ, ವೆಂಕಟೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಾಂಗಲ್ಯ ಸರ ಕದ್ದು, ಮಣ್ಣಿನ ಗುಡ್ಡೆಯಲ್ಲಿ ಬಚ್ಚಿಟ್ಟಿರುವುದಾಗಿ ಬಾಯಿಬಿಟ್ಟಿದ್ದಾನೆ.

ಇನ್ಸ್ ಪೆಕ್ಟರ್ ಸತೀಶ್ ನೇತೃತ್ವದಲ್ಲಿ ಪೊಲೀಸರು ಆರೋಪಿ ಜೊತೆ ಸ್ಥಳಕ್ಕೆ ತೆರಳಿ ಬಚ್ಚಿಟ್ಟಿದ್ದ ಮಾಂಗ್ಯಲ್ಯ ಸರವನ್ನು ವಶಕ್ಕೆ ಪಡೆದು, ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

09/04/2022 09:13 am

Cinque Terre

1.84 K

Cinque Terre

0

ಸಂಬಂಧಿತ ಸುದ್ದಿ