ಬೆಂಗಳೂರು: ನಗರದ ಮತ್ತೆರಡು ಶಾಲೆಗಳಿಗೆ ಬಾಂಬ್ ಬೆದರಿಕೆಯ ಮೇಲ್ ಬಂದಿದೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕೊಪ್ಪ ಬೇಗೂರು ರಸ್ತೆಯಲ್ಲಿರೊ ಕ್ಯಾಂಡಾರ್ ಸ್ಕೂಲ್ ಮತ್ತು ರೆಡ್ ಬ್ರಿಡ್ಜ್ ಸ್ಕೂಲ್ ಗೆ ಬೆದರಿಕೆ ಮೇಲ್‌ಬಂದಿದೆ. ಮೇಲ್ ಪರಿಶೀಲಿಸಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಬನ್ನೇರುಘಟ್ಟ ಪೊಲೀಸರು, ಬಾಂಬ್ ಸ್ಕ್ವಾಡ್ ಹಾಗು ಡಾಗ್ ಸ್ಕ್ವಾಡ್ ನಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಶಾಲೆಯ ಪ್ರತಿಯೊಂದು ಸ್ಥಳ , ವಸ್ತುಗಳನ್ನ ಪರಿಶೀಲನೆ ನಡೆಸ್ತಿದ್ದಾರೆ. ಆದ್ರೆ ಇದು ವರೆಗೂ ಪೊಲೀಸ್ರಿಗೆ ಯಾವೂದೇ ಬಾಂಬ್ ಪತ್ತೆಯಾಗಿಲ್ಲ.
PublicNext
08/04/2022 03:55 pm