ಹೊಸಕೋಟೆ:- ಬೆಂಗಳೂರಿನ ಬಿನ್ನಿಪೇಟೆಮಾಜಿ ಕಾರ್ಪೋರೇಟರ್ ಐಶ್ವರ್ಯ ನಾಗರಾಜ್ ಪತಿ ಲೋಹಿತ್ ಪತ್ತೆಗಾಗಿ ನಂದಗುಡಿ ಪೊಲೀಸರಿಂದ ತನಿಖೆ ಮುಂದುವರೆದಿದೆ. ಲೋಹಿತ್ ಪತ್ತೆಗಾಗಿ
ಕಳೆದ 11ದಿನಗಳಿಂದ ತೀವ್ರ ಶೋಧ ಮುಂದುವರೆಸಿರೊ ಪೊಲೀಸರಿಗೆ ಇದುವರೆಗೂ ಯಾವುದೇ ಕ್ಲೂ ಸಿಕ್ಕಿಲ್ಲ..
ಪ್ರಕರಣ ಸಂಬಂಧ ಬೆಂಗಳೂರು ಗ್ರಾಮಾಂತರ SP.ವಂಶಿಕೃಷ್ಣ ಮಾತನಾಡಿ, ಲೋಹಿತ್ ಪತ್ತೆಗೆ ನಾಲ್ಕು ವಿಶೇಷ ತಂಡ ರಚಿಸಲಾಗಿದೆ. ಹೊಸಕೋಟೆಯ ನಂದಗುಡಿ ವ್ಯಾಪ್ತಿ ಹಳೇಊರು ಅರಣ್ಯ ಪ್ರದೇಶದ 200 ಮೀಟರ್ನಲ್ಲಿ ಲೋಹಿತ್ ಕಾರು ಪತ್ತೆಯಾಗಿದೆ.
ಕುಟುಂಬಸ್ಥರು ಘಟನೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ. ಕಾರಿನ ಮೇಲೆ ರಕ್ತದ ಕೆಲ ಗುರುತು ಸಿಕ್ಕಿವೆ.
ಕಾರಿನಲ್ಲಿ ರಕ್ತದ ಕಲೆ ಹಾಗು 4-5ಮಾರ್ಕ್ಸ್ ಕಂಡುಬಂದಿವೆ.
ವಿಟ್ನೆಸ್ ಸೇರಿದಂತೆ ಕೆಲವರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದ್ದೇವೆ..
ಹಣಕ್ಕಾಗಿ ಕಿಡ್ನಾಪ್ ಮಾಡಿದ್ದಾರಾ..!? ಆ ಆಯಾಮದಲ್ಲೂ ತನಿಖೆ ನಡೆಸ್ತಿದ್ದೇವೆ.
ನಾಪತ್ತೆಯಾದ ಲೋಹಿತ್ ಪೋನ್ ಸ್ವಿಚ್ ಆಫ್ ಇದೆ..
ಕಾರ್ ಹಿಂಭಾಗದ ಟಯರ್ ಪಂಚರ್ ಆಗಿರೊ ತರ ಕಂಡುಬಂದಿದೆ.
ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಟೋಲ್ ಬಳಿ ಲೋಹಿತ್ ಒಬ್ಬರೆ ಪಾಸ್ ಆಗಿರುವುದು ಗೊತ್ತಾಗಿದೆ..ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ ಎಂದು S.P.ತಿಳಿಸಿದ್ದಾರೆ..
PublicNext
07/04/2022 09:23 pm