ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗನಿಗೆ ಬೆಂಕಿ ಹಚ್ಚಿ ಕೊಂದ ಪಾಪಿ ಅಪ್ಪ: ಬೆಂಗಳೂರಲ್ಲಿ ಭೀಭತ್ಸ ಕೃತ್ಯ

ಬೆಂಗಳೂರು: ಪಾಪಿ ತಂದೆಯೊಬ್ಬ ಮಗನ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ಆಸ್ಪತ್ರೆ ಪಾಲಾಗಿದ್ದ ಮಗ ಅನ್ಯಾಯದ ಸಾವು ಕಂಡಿದ್ದಾನೆ.

ಇಡೀ ಬೆಂಗಳೂರು ಮಹಾನಗರವೇ ಬೆಚ್ಚಿ ಬೀಳುವ ಅತ್ಯಂತ ಅಮಾನವೀಯ ಘಟನೆ ಆಜಾದ್ ನಗರದ ಮುಖ್ಯ ರಸ್ತೆಯಲ್ಲಿ ನಡೆದಿದೆ‌. ಕಳೆದ ವಾರ ನಡೆದ ಈ ಘಟನೆ ತಡವಾಗಿ ಸುದ್ದಿಯಾಗಿದೆ‌. ಆಜಾದ್ ನಗರ ನಿವಾಸಿ ಸುರೇಂದ್ರ ಎಂಬಾತನೇ ಪುತ್ರನಿಗೆ ಬೆಂಕಿ ಹಚ್ಚಿದ ಪಾಪಿ ತಂದೆ.

12 ಸಾವಿರ ಹಣ ಕಳೆದುಕೊಂಡನೆಂಬ ಕಾರಣಕ್ಕೆ 25 ವರ್ಷ ವಯಸ್ಸಿ‌ನ ಪುತ್ರ ಅರ್ಪಿತ್‌ ಮೈ ಮೇಲೆ ಪೆಟ್ರೋಲ್ ಸುರಿದ ತಂದೆ ಸುರೇಂದ್ರ ನಂತರ ಕಡ್ಡಿ ಗೀರಿ ಬೆಂಕಿ ಹಚ್ಚಿಯೇ ಬಿಟ್ಟಿದ್ದಾನೆ. ಬೆಂಕಿಯ ನೋವಿನಿಂದ ಸಂಕಟಗೊಂಡ ಮಗ ಅರ್ಪಿತ್ ಓಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೂಡಲೇ ಸ್ಥಳೀಯರು ಅರ್ಪಿತ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ‌. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಅರ್ಪಿತ್ ಒಂದು ವಾರದ ನಂತರ ಜೀವ ಬಿಟ್ಟಿದ್ದಾನೆ. ಚಾಮರಾಜಪೇಟೆ ಪೊಲೀಸರು ಕರುಣೆ ಇಲ್ಲದ ಕಪಟ ಅಪ್ಪನನ್ನು ಬಂಧಿಸಿ ಒಳಗೆ ತಳ್ಳಿದ್ದಾರೆ.

Edited By : Shivu K
Kshetra Samachara

Kshetra Samachara

07/04/2022 01:41 pm

Cinque Terre

10.89 K

Cinque Terre

21

ಸಂಬಂಧಿತ ಸುದ್ದಿ