ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಂದ್ರು ಕೊಲೆ : FIR ದಾಖಲು

ಬೆಂಗಳೂರು: ಜೆಜೆಆರ್ ನಗರಲ್ಲಿ ನಡೆದ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರು ಜೊತೆಗಿದ್ದ ಸ್ನೇಹಿತ ಸೈಮನ್ ರಾಜ್ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸೈಮನ್ ನೀಡಿರುವ ದೂರಿನಲ್ಲಿರುವ ಪ್ರಮುಖ ಅಂಶಗಳು ಏಪ್ರಿಲ್ 4 ರಂದು ಸೈಮನ್ ರಾಜ್ ಹುಟ್ಟಹಬ್ಬ ಹಿನ್ನೆಲೆ ರಾತ್ರಿ 12 ಗಂಟೆ ಸುಮಾರಿಗೆ ಮನೆ ಮುಂದೆ ಚಂದ್ರು ಮತ್ತು ಸೈಮನ್ ರಾಜ್ ಕೇಕ್ ಕಟ್ ಮಾಡಿದ್ರು. ಬಳಿಕ ಸೈಮನ್ ಗೆ ಚಿಕನ್ ರೋಲ್ ಕೊಡಿಸು ಎಂದು ಕೊಲೆಯಾದ ಚಂದ್ರು ಕೇಳಿದ್ದನಂತೆ. ಈ ವೇಳೆ ಚಿಕನ್ ರೋಲ್ ತರಲು ಹೋಂಡಾ ಆಕ್ಟೀವಾ ಬೈಕ್ ನಲ್ಲಿ ಸೈಮನ್ ಮತ್ತು ಚಂದ್ರು ತೆರಳಿದ್ವಿ.

ಚಾಮರಾಜಪೇಟೆ ಸುತ್ತಮುತ್ತ ಇಬ್ಬರು ಸುತ್ತಾಡಿ,ಬಳಿಕ ರಂಜಾನ್ ಹಿನ್ನೆಲೆಯಲ್ಲಿ ಗೋರಿಪಾಳ್ಯದಲ್ಲಿ ಚಿಕನ್ ರೋಲ್ ಸಿಗುತ್ತೆ ಎಂದು ರಾತ್ರಿ 2.15 ರಲ್ಲಿ ಹಳೆಗುಡ್ಡದಹಳ್ಳಿಯ 9ನೇ ಮುಖ್ಯರಸ್ತೆಯಲ್ಲಿ ಹೋಗುವಾಗ ನಾವು ಹೋಗ್ತಿದ್ದ ಬೈಕ್ ಗೆ ಇನ್ನೊಂದು ಬೈಕ್ ಡಿಕ್ಕಿಯಾಗಿತ್ತು. ಆಗಾ ಚಂದ್ರು ಹಾಗೂ ನಾನು ಡಿಕ್ಕಿ ಹೊಡೆದವರನ್ನು ಏರುಧ್ವನಿಯಲ್ಲಿ ಪ್ರಶ್ನೆ ಮಾಡಿದ್ವಿ.

ಈ ವೇಳೆ ಶಾಹಿದ್ ಎಂಬಾತ ಅದನ್ನ ಕೇಳಲು ನೀವ್ಯಾರು, ನಾನು ಇದೇ ಏರಿಯಾದವನು, ಏನ್ ಮಾಡಿಕೊಳ್ತೀಯಾ ಎಂದು ಹುಡುಗರನ್ನ ಸೇರಿಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಈ ವೇಳೆ ಮಾತು ವಿಕೋಪಕ್ಕೆ ತಿರುಗಿ ಚಂದ್ರು ಹಾಗೂ ನನ್ನ ಮೇಲೆ ಶಾಹೀದ್ ಹಾಗೂ ಇತರರು ಏಕಾಏಕಿ ಲಾಂಗ್ ಬೀಸಿದ್ರು, ಘಟನೆಯಲ್ಲಿ ನಾನು ಬಚಾವಾದೆ ಚಂದ್ರುವಿನ ತೊಡೆಗೆ ಚಾಕುವಿನಿಂದ ಶಾಹಿದ್ ಇರಿದಿದ್ರು ಇರಿದ ರಭಸಕ್ಕೆ ಚಂದ್ರು ತೊಡೆಯಿಂದ ತೀವ್ರ ರಕ್ತಸ್ರಾವ ಆಗೋದನ್ನ ನೋಡಿ ಶಾಹಿದ್ ಆ್ಯಂಡ್ ಗ್ಯಾಂಗ್ ಎಸ್ಕೇಪ್ ಆಗಿದ್ರು, ಬಳಿಕ ಚಂದ್ರುನನ್ನ ಆಟೋದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದ್ವಿ. ಆದರೆ ಮುಂಜಾನೆ 4 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಚಂದ್ರು ಮೃತಪಟ್ಟಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.

ಈ ಹಿನ್ನೆಲೆ ಚಂದ್ರು ಕೊಲೆ ಮಾಡಿರುವ ಶಾಹಿದ್ ಹಾಗೂ ಇತರರ ಮೇಲೆ ಕ್ರಮ ಕೈಗೊಳ್ಳುವಂತೆ ಸೈಮನಗ ದೂರು ದಾಖಲಿಸಿದ್ದಾರೆ.

Edited By : Nirmala Aralikatti
PublicNext

PublicNext

06/04/2022 07:07 pm

Cinque Terre

19.53 K

Cinque Terre

1

ಸಂಬಂಧಿತ ಸುದ್ದಿ