ಬೆಂಗಳೂರು: ರೈಲ್ವೇ ಪ್ರಯಾಣಿಕ ರಮೇಶ್ ಚಂದ್ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 20 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಕಳೆದುಕೊಂಡಿದ್ದರು.
ಅಜ್ಮೀರ್ಗೆ ಹೊರಟಿದ್ದ ರಮೇಶ್ ಚಂದ್ 20 ಲಗೇಜ್ ಬ್ಯಾಗ್ಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಟಿಕೆಟ್ ಬುಕಿಂಗ್ ಕೌಂಟರ್ ಬಳಿ ಒಂದು ಬ್ಯಾಗ್ ಮರೆತು ಹೋಗಿದ್ದ ರಮೇಶ್ ಕುಟುಂಬ, ಬಳಿಕ 2 ಗಂಟೆಗಳ ನಂತರ ಗಮನಕ್ಕೆ ಬಂದು, ಎಲ್ಲಾ ಕಡೆ ಹುಡುಕಾಡಿ ಬ್ಯಾಗ್ ಸಿಗದಿದ್ದಾಗ ತಕ್ಷಣ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ರು. ತಕ್ಷಣ ಕಾರ್ಯ ಪ್ರವೃತ್ತರಾದ ರೈಲ್ವೆ ಪೊಲೀಸ್ ತಂಡ, 20 ಲಕ್ಷ ಮೌಲ್ಯದ ಚಿನ್ನದ ಒಡೆವೆಗಳಿದ್ದ ಬ್ಯಾಗ್ನ್ನು ಪತ್ತೆ ಮಾಡಿ ಮಾಲೀಕರಿಗೆ ಕೊಟ್ಟಿದ್ದಾರೆ.
ಬ್ಯಾಗ್ ಪತ್ತೆ ಹಚ್ಚುವಲ್ಲಿ ಶ್ರದ್ಧೆ ತೋರಿದ ಗೃಹ ರಕ್ಷದಳದ ಗುರುರಾಜ್ ಮತ್ತು ಸಿಬ್ಬಂದಿ ಕಾರ್ಯಕ್ಕೆ ಹಿರಿಯ ಅಧಿಕಾರಿಗಳ ಪ್ರಶಂಸಿಸಿದ್ದಾರೆ.
Kshetra Samachara
06/04/2022 04:47 pm