ಬೆಂಗಳೂರು:ಮೋಜು ಮಸ್ತಿಗಾಗಿ ಆಟೋ ಮತ್ತು ಬೈಕ್ ಗಳನ್ನು ಕಳ್ಳತನ ಮಾಡ್ತಿದ್ದ ಆರೋಪಿಯನ್ನ ಚಂದ್ರಲೇಔಟ್ ಪೊಲೀಸ್ರು ಬಂಧಿಸಿದ್ದಾರೆ. ಒಂದು ಬೈಕ್ ಕಳ್ಳತನ ಪ್ರಕರಣ ಬೆನ್ನತ್ತಿದ ಪೊಲೀಸ್ರಿಗೆ ನಾಲ್ಕು ಬೈಕ್ ಮತ್ತು ಒಂದು ಆಟೋ ರಿಕವರಿ ಸಮೇತ ಕಳ್ಳ ಲಾಕ್ ಆಗಿದ್ದಾನೆ.
ಕಳೆದ ತಿಂಗಳು ಚಂದ್ರಾಲೇಔಟ್ ನಲ್ಲಿ ಬೈಕ್ ಕಳದುಕೊಂಡವರು ಠಾಣೆಗೆ ದೂರು ನೀಡಿದ್ರು. ಬೈಕ್ ಕಳ್ಳನ ಬೆನ್ನು ಹತ್ತಿದ ಪಿಎಸ್ ಐ ಅನಿತಲಕ್ಷ್ಮೀ ಆ್ಯಂಡ್ ಟೀಂ ಸಿಸಿಟಿವಿ ಮತ್ತು ಟೆಕ್ನಿಕಲ್ ಎವಿಡೆನ್ಸ್ ಆಧರಿಸಿ ಬೈಕ್ ಕಳ್ಳ ಗಣೇಶ್ ನನ್ನ ಬಂಧಿಸಿ ಮೂರು ಲಕ್ಷ ಮೌಲ್ಯದ ನಾಲ್ಕು ಬೈಕ್ ಹಾಗೂ ಒಂದು ಆಟೋ ಸೀಜ್ ಮಾಡಿದ್ದಾರೆ.
Kshetra Samachara
06/04/2022 04:19 pm