ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜೆಜೆಆರ್ ಕೊಲೆ ಪ್ರಕರಣ; 12 ಗಂಟೆಯೊಳಗೆ ಮೂವರು ಆರೋಪಿಗಳು ಅರೆಸ್ಟ್

ಬೆಂಗಳೂರು: ತಡರಾತ್ರಿ ಜೆಜೆಆರ್ ನಗರದಲ್ಲಿ ಕೊಲೆ ಪ್ರಕರಣ ನಡೆದ 12 ಗಂಟೆಯಲ್ಲೇ ಇನ್‌ ಸ್ಪೆಕ್ಟರ್ ಮಂಜುನಾಥ್ ಮತ್ತು ತಂಡ ಕೊಲೆಗಡುಕರನ್ನು ಬಂಧಿಸಿದೆ.

ಐಟಿಐ ಪದವೀಧರ ಚಂದ್ರು ರೈಲ್ವೆಯಲ್ಲಿ ತಾತ್ಕಾಲಿಕವಾಗಿ ಫಿಟ್ಟರ್ ಕೆಲಸ ಮಾಡಿಕೊಂಡಿದ್ದ. ನಿನ್ನೆ ಸ್ನೇಹಿತ ಸೈಮನ್ ಹುಟ್ಟುಹಬ್ಬವಿತ್ತು. ಹೀಗಾಗಿ ತಡರಾತ್ರಿವರೆಗೂ ಪಾರ್ಟಿ ಮಾಡಿ ಊಟಕ್ಕಾಗಿ ಅಲೆದಾಡಿದ್ದಾರೆ. ತಾನಿರುವ ಛಲವಾದಿ ಪಾಳ್ಯದಲ್ಲಿ ಯಾವುದೇ ಹೊಟೇಲ್ ಗಳು ಓಪನ್ ಇರಲಿಲ್ಲ. ರಂಝಾನ್ ಟೈಂ ಅಲ್ವ, ಸೋ... ಜೆಜೆ ನಗರಕ್ಕೆ ಹೋದರೆ ಚಿಕನ್ ರೋಲ್ ಗಳು ಸಿಗುತ್ತೆ ಎಂದು ಬೈಕಿನಲ್ಲಿ ಜೆಜೆ ನಗರಕ್ಕೆ ಬಂದಿದ್ದಾರೆ.

ಈ ವೇಳೆ ಅಪರಿಚಿತ ಯುವಕರ ಬೈಕಿಗೆ ಚಂದ್ರುವಿನ ಬೈಕ್ ಟಚ್ ಆಗಿದೆ. ಈ ವೇಳೆ ಎರಡೂ ಗುಂಪಿನ ಮಧ್ಯೆ ಮಾತಿಗೆ ಮಾತು ಬೆಳೆದು ನಾಲ್ವರಲ್ಲಿ ಒಬ್ಬ ಏಕಾಏಕಿ ಚಾಕುವಿನಿಂದ ಚಂದ್ರುಗೆ ಚುಚ್ಚಿದ್ದಾನೆ. ನಂತರ ಸೈಮನ್ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ. ಮುಂಜಾವ 2.30ರ ಸುಮಾರಿಗೆ ಈ ಘಟನೆ ನಡೆದಿದೆ.

ಆದರೆ, ಒಂದು ಗಂಟೆ ಬಳಿಕ ಆಟೋದಲ್ಲಿ ಚಂದ್ರುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಇನ್ನು ಪೊಲೀಸರು 4.30ಕ್ಕೆ ಪ್ರಕರಣ ದಾಖಲಿಸಿ, ಮಿಂಚಿನ ಕಾರ್ಯಾಚರಣೆ ನಡೆಸಿ‌ ಶಾಹಿದ್ ಎಂಬ ಒಂದೇ ಹೆಸರಿನ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಘಟನೆ ನಡೆದಿದ್ದು ಅಚಾನಕ್ಕಾಗಿ. ಆದರೆ, ಹಂತಕರ ಬಳಿ‌ ಅದಾಗಲೇ ವೆಪನ್ಸ್‌ ತಯಾರಿತ್ತು! ಬಂಧಿತರಲ್ಲಿ ಒಬ್ಬ ಬಾಲಾಪರಾಧಿಯಾಗಿರೋದು ವಿಪರ್ಯಾಸ.

Edited By : Nagesh Gaonkar
PublicNext

PublicNext

06/04/2022 07:58 am

Cinque Terre

35.31 K

Cinque Terre

0

ಸಂಬಂಧಿತ ಸುದ್ದಿ