ಯಲಹಂಕ: ಮಾರ್ಚ್ 26ರಂದು ಉಡುಪಿ ಜಿಲ್ಲೆಯ ಮಣಿಪಾಲ ಮೂಲದ ದರೋಡೆಕೋರರು ಬೆಂಗಳೂರು ಮೂಲದ ವ್ಯಕ್ತಿಯ ಕಾರು ಅಡ್ಡಗಟ್ಟಿ ಸುಲಿಗೆ ಮಾಡಿದ್ದರು. ಉಡುಪಿಯ ಈ ಅಶಿಕ್ ಮತ್ತು ಇಸಾಕ್ ವಿರುದ್ಧ ಮಣಿಪಾಲದಲ್ಲಿ ರೌಡಿಶೀಟರ್ ಸಹ ತೆರೆಯಲಾಗಿದೆ. ಈ ಇಬ್ಬರು ದರೋಡೆ ಮಾಡಿದ ರಿಟ್ಜ್ ಕಾರಿನಲ್ಲಿ ಆತನನ್ನು ಎಟಿಎಂಗೆ ಕರೆದೊಯ್ದು, ದುಡ್ಡು ಡ್ರಾ ಮಾಡಿಸಿ ನಂತರ ಆತನ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಬಗ್ಗೆ ಸಂತ್ರಸ್ತ ವ್ಯಕ್ತಿ ಕೊತ್ತನೂರು ಠಾಣೆಯಲ್ಲಿ ರಾಬರಿ ಕೇಸ್ ದಾಖಲಿಸಿದ್ದ.
ದೂರು ದಾಖಲಿಸಿದ ಕೊತ್ತನೂರು ಪೊಲೀಸರು ಸಂಪಿಗೆಹಳ್ಳಿ ಉಪವಿಭಾಗ ಎಸಿಪಿ ರಂಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದರು. ಖಚಿತ ಮಾಹಿತಿ ಮೇರೆಗೆ ಕೊತ್ತನೂರು ಇನ್ಸ್ ಪೆಕ್ಟರ್ ಚನ್ನೇಶ್ ಮತ್ತು ತಂಡ ಬಂಧಿಸಲು ಇಂದು ಸಂಜೆ ತೆರಳಿದ್ದರು. ಈ ವೇಳೆ ಆಶಿಕ್ (21) & (22) ಇಸಾಕ್ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ.
ಕೊತ್ತನೂರು PSI ಉಮೇಶ್ ರವರಿಗೆ ಚಾಕು ಹಾಕಿದ ದರೋಡೆಕೋರರ ಶರಣಾಗತಿಗೆ ಯತ್ನಿಸಿದರೂ ಪ್ರಯೋಜನ ಆಗಿರಲಿಲ್ಲ. ನಂತರ ಇನ್ಸ್ ಪೆಕ್ಟರ್ ಚನ್ನೇಶ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರೂ ಪ್ರಯೋಜನವಾಗಿರಲಿಲ್ಲ. ಈ ವೇಳೆ ಸಂಪಿಗೇಹಳ್ಳಿ ಲಿಮಿಟ್ಸ್ ಶಿವರಾಮ ಕಾರಂತ ಬಡಾವಣೆಯ ಕ್ಲಬ್ ಬಳಿ ಶೂಟೌಟ್ ಮಾಡಿ ಈ ದರೋಡೆಕೋರರನ್ನು ಬಂಧಿಸಲಾಗಿದೆ.
- SureshBabu Public Next ಯಲಹಂಕ
PublicNext
05/04/2022 10:42 pm