ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪತ್ನಿಗಾಗಿ ಚೈನ್ ಸ್ನಾಚ್ ಮಾಡ್ತಿದ್ದ ಸರಗಳ್ಳ

ಬೆಂಗಳೂರು: ಪ್ರೀತಿಸಿ ಮದುವೆಯಾದ ಪತ್ನಿಗಾಗಿ ಅದಾಗ್ಲೆ ಒಮ್ಮೆ ಜೈಲೂ ಸೇರಿ ಬಂದಿದ್ದ ಆರೋಪಿ ಮತ್ತೆ ಪತ್ನಿ ಖುಷಿಗಾಗಿ ಸರಗಳ್ಳತನಕ್ಕೆ ಇಳಿದಿದ್ದ. ಬಾಲ್ಯವಿವಾಹ ಆಗಿ ಜೈಲುವಾಸ ಅನುಭವಿಸಿ ಬಂದವನು ಪತ್ನಿಯನ್ನು ಸುಖವಾಗಿಡಲು ಅಂತರ್ ರಾಜ್ಯ ಸರಗಳ್ಳನಾಗಿದ್ದ.

ನಗರದಲ್ಲೂ ಇತ ತನ್ನ ಕೈಚಳಕ ತೋರಿ ಪೊಲೀಸರಿಗೆ ತಲೆ ಬಿಸಿ ಮಾಡಿದ್ದ. ಒಂದೇ ದಿನ ಸರಣಿ ಸರಗಳ್ಳತನ ನಡೆಸಿದ್ದ. ಪೊಲೀಸರೂ ಕೂಡ ಈ ಸರಗಳವಿನ ಬಗ್ಗೆ ವಿಪರೀತ ತಲೆ ಕೆಡಿಸಿಕೊಂಡಿದ್ದರು.

ಇವನ ಹೆಸರು ಉಮೇಶ್ ಖಟಿಕ್. ಅಂತರರಾಜ್ಯ ಸರಗಳ್ಳನಾಗಿರುವ ಉಮೇಶ್ ಸರ ಕದಿಯಲು ವಿಮಾನದಲ್ಲಿ ಬರುತ್ತಿದ್ದ. ನಗರಕ್ಕೆ ಬಂದೊಡನೆ ಆತ ಮಾಡುತ್ತಿದ್ದ ಮೊದಲ ಕೆಲಸ ಅಂದ್ರೆ ಬೈಕ್‌ಗಳನ್ನು ಕದಿಯುವುದು. ಬಳಿಕ ಪಬ್ಲಿಕ್ ಕಡಿಮೆ‌ ಇರುವ ಕಡೆ ಸರಗಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ.

ಉಮೇಶ್ ಇದೇ ರೀತಿ ಕಾಮಾಕ್ಯ ಬಳಿ ಇರುವ ರಸ್ತೆಯಲ್ಲಿ ಉಷಾ ಎನ್ನುವವರ ಸರ ಕದ್ದು ಪರಾರಿಯಾಗಿದ್ದ. ಈ ಬಗ್ಗೆ ನಂತರ ತನಿಖೆ ಕೈಗೊಂಡಾಗ ಅಕ್ಕಪಕ್ಕದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ರಾಜಸ್ಥಾನದಲ್ಲಿ ಆರೋಪಿಯನ್ನ ಬಂಧಿಸಿದ್ದಾರೆ.

ವಿಚಾರಣೆ ವೇಳೆ ಈ ಹಿಂದೆ ಪುಟ್ಟೇನಹಳ್ಳಿ, ಮಾರತ್ ಹಳ್ಳಿಯಲ್ಲೂ ಕೂಡ ಸರಗಳ್ಳತ ಮಾಡಿ ಹೈದರಾಬಾದ್‌ಗೆ ಹೋಗಿದ್ದ ಅಲ್ಲೂ ಕೂಡ ಬೈಕ್ ಕದ್ದು ಯಥಾ ಪ್ರಕಾರ ಬೈಕ್ ಕದ್ದು ಸರಗಳ್ಳತನ ಮಾಡಿರೋದು ಬೆಳಕಿಗೆ ಬಂದಿದೆ.

ಇನ್ನು ಆರೋಪಿಯ ವಿರುದ್ಧ ನಗರದಲ್ಲಿ ಏಳು ಪ್ರಕರಣಗಳಿದ್ದರೆ, ರಾಜಸ್ಥಾನದಲ್ಲಿ 18‌ ಮತ್ತು ಹೈದರಾಬಾದ್ ನಲ್ಲಿ 8‌ಕೇಸ್‌ಗಳು ದಾಖಲಾಗಿವೆ.

Edited By : Nagesh Gaonkar
PublicNext

PublicNext

04/04/2022 06:14 pm

Cinque Terre

26.47 K

Cinque Terre

0

ಸಂಬಂಧಿತ ಸುದ್ದಿ