ಬೆಂಗಳೂರು: ವಿಧಾನಸೌಧ ಠಾಣೆಯಲ್ಲಿ ವಂಚನೆ, ಬೆದರಿಕೆ ಪ್ರಕರಣಗಳೇ ಹೆಚ್ಚಾಗಿ ದಾಖಲಾಗೋದು ಸದ್ಯ ದಶಕದ ನಂತರ ವಿಧಾನಸೌಧದ ಠಾಣೆಯಲ್ಲಿ ಕೊಲೆ ಪ್ರಕರಣವೊಂದು ದಾಖಲಾಗಿದೆ.
ಪತ್ನಿಯನ್ನ ಕೊಲೆ ಮಾಡಿ ವಿಮಾನದಲ್ಲಿ ಎಸ್ಕೇಪ್ ಆಗಲು ಯತ್ನಿಸಿದ್ದ ಆರೋಪಿಯನ್ನ ವಿಧಾನಸೌಧ ಪೊಲೀಸ್ರು ಬಂಧಿಸಿದ್ದಾರೆ.
ಆರೋಪಿಯ ಫುಲ್ಚಾಂದ್ ಉರವ್ ತನ್ನ ಪತ್ನಿ ಸಂಚಿ ಉರವ್ ಕೊಲೆ ಮಾಡಿ ಏರ್ ಪೋರ್ಟ್ ಗೆ ಹೋಗಿ ವಿಮಾನ ಹತ್ತುವಾಗ ಪೊಲೀಸರಿಗೆ ಲಾಕ್ ಆಗಿದ್ದಾರೆ. ಕಳೆದ ತಿಂಗಳ 26ರಂದು ತಲೆಗೆ ಬಲವಾಗಿ ಹೊಡೆದು ಹಲ್ಲೆ ನಡೆಸಿ ಕೊಲೆ ಮಾಡಿದ್ದ ಆರೋಪಿ.
ಕನ್ನಿಗ್ಯಾಂ ರಸ್ತೆಯ ಮಾತೆನ್ ಬಿಲ್ಡಿಂಗ್ ಬಳಿ ನಡೆದಿದ್ದ ಘಟನೆ ಇದಾಗಿತ್ತು. ಜಾರ್ಖಾಂಡ್ ಮೂಲದ ದಂಪತಿ ಕಳೆದ ಮೂರು ವರ್ಷದಿಂದ ಬೆಂಗಳೂರಿನಲ್ಲಿ ವಾಸವಿದ್ರು, ಮರಗೆಲಸ ಮಾಡುತಿದ್ದ ಪೂಲ್ ಚಾಂದ್ ಪತ್ನಿ ಸಹಾಯ ಮಾಡ್ತಿದ್ಳು.
ಪದೇ ಪದೇ ಪತಿ ಪತ್ನಿ ನಡುವೆ ಜಗಳ ನಡೆಯುತ್ತಿದ್ರಿಂದ ಘಟನೆ ನಡೆದ ದಿನ ಕೂಡ ಗಲಾಟೆಯಲ್ಲಿ ಪತ್ನಿಗೆ ಜೋರಾಗಿ ಹಲ್ಲೆ ನಡೆಸಿದ್ರಿಂದ ಪ್ರಾಣ ಬಿಟ್ಟಿದ್ಳು. ಕೊಲೆ ನಂತರ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ ಪತಿ ವಿಮಾನ ನಿಲ್ದಾಣದಲ್ಲಿ ಲಾಕ್ ಆಗಿದ್ದ.
ಇನ್ನೂ ಈ ಕೊಲೆ ಪ್ರಕರಣದಿಂದ ದಶಕದ ನಂತರ ವಿಧಾನಸೌಧದ ಠಾಣಾವ್ಯಾಪ್ತಿಯಲ್ಲಿ ಕೊಲೆ ಪ್ರಕರಣವೊಂದು ದಾಖಲಾಗಿದೆ.
PublicNext
04/04/2022 04:13 pm