ಬೆಂಗಳೂರು: ನಕಲಿ ನಕಲಿ ಎಲ್ಲವೂ ನಕಲಿ, ಸುಲಭವಾಗಿ ಹಣ ಮಾಡೋಕೆ ಸಿಕ್ಕ ಸಿಕ್ಕ ವಸ್ತುಗಳನ್ನು ನಕಲಿ ಮಾಡುವ ಜಾಲ ವ್ಯಾಪಕವಾಗಿ ಹರಡಿದೆ. ಸದ್ಯ ಇಂಥದೊಂದು ದೊಡ್ಡ ಜಾಲವನ್ನು ಅಶೋಕನಗರ ಪಿಎಸ್ ಐ ಅಶ್ವಿನಿ ಆ್ಯಂಡ್ ಟೀಂ ಪತ್ತೆ ಮಾಡಿದೆ.
ಎಸ್ ಕ್ಯಾಸ್ಟ್ರೋಲ್, ಶೆಲ್, ಸೇರಿದಂತೆ ಹಲವು ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ಎಂಜಿನ್ ಆಯಿಲ್ ಕಲಬೆರಕೆ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಗಳ ಜಾಡನ್ನು ಪತ್ತೆಹಚ್ಚಿದ್ದಾರೆ.
ವಂಚಕರಾದ ಸ್ವಾಮಿ ಮತ್ತು ನಾಗರಾಜ ಎನ್ನುವವರನ್ನು ಅಶೋಕನಗರ ಪೊಲೀಸ್ರು ಬಂಧಿಸಿದ್ದಾರೆ.
ಆಯಿಲ್ ಕಲಬೆರಕೆ ಮಾಡಿ ಅನುಮಾನ ಬರದಂತೆ ಅದೇ ಕಂಪೆನಿಗಳ ಸ್ಟಿಕ್ಕರ್, ಸೀಲ್ ಅಂಟಿಸಿ ಪ್ಯಾಕ್ ಮಾಡಿ ನಗರದೆಲ್ಲೆಡೆ ಮಾರಾಟ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ಅತೀ ಕಡಿಮೆ ಬೆಲೆಗೆ ಎಂಜಿನ್ ಆಯಿಲ್ ಮಾರಾಟ ಮಾಡ್ತಿದ್ರು ಇಷ್ಟು ಕಡಿಮೆ ಬೆಲೆಗೆ ಹೇಗೆ ಕೊಡ್ತಾರೆ ಎಂದು ವಿಚಾರಿಸಿದಾಗ ಕಂಪಯಿಂದ ನಾವೂ ಕ್ರಾಸ್ ರೂಟ್ ನಲ್ಲಿ ತಂದು ಕೋಡುವುದಾಗಿ ಹೇಳ್ತಿದ್ರು.ಅನುಮಾನಗೊಂಡ ಅಶೋಕನಗರ ಪೊಲೀಸ್ರು ಇವ್ರ ಬೆನ್ನು ಹತ್ತಿದಾಗ ಚೆನ್ನಪಟ್ಟಣದಲ್ಲಿ ಕಚ್ಚಾ ಆಯಿಲ್ ಪ್ಲಾಂಟ್ ಪತ್ತೆಯಾಗಿತ್ತು.
ಇದೇ ಮಾಹಿತಿ ಅಶೋಕ ನಗರ ಪೊಲೀಸರು ದಾಳಿನಡೆಸಿ ನಕಲಿ ಆಯಿಲ್ ಪ್ಲಾಂಟ್ ಸೀಜ್ ಮಾಡಿ 10ಲಕ್ಷ ಮೌಲ್ಯದ ವಸ್ತುಗಳನ್ನು ಸೀಜ್ ಮಾಡಿದ್ದಾರೆ.
ಇನ್ನೂ ನಕಲಿ ಆಯಿಲ್ ಎಂದು ತಿಳಿಯದೆ ಸಾಕಷ್ಟು ಗ್ಯಾರೇಜ್ ಗಳಲ್ಲಿ ಈ ನಕಲಿ ಆಯಿಲ್ ಯೂಸ್ ಆಗಿದ್ದು, ಘಟನೆ ಸಂಬಂಧ ಕೇಸ್ ದಾಖಲಿಸಿ ಆರೋಪಿ ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್.
PublicNext
04/04/2022 03:37 pm