ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾರ್ಕ್ ನಲ್ಲಿ ಮಹಿಳೆಯರ ವೀಡಿಯೋ ಮಾಡ್ತಿದ್ದ ಸೈಕೋಪಾತ್ ಅರೆಸ್ಟ್

ಬೆಂಗಳೂರು: ಪಾರ್ಕ್ ನಲ್ಲಿ ವಾಕಿಂಗ್ ಮಾಡುವ ಮಹಿಳೆಯರ ಫೋಟೋ ಮತ್ತು ವೀಡಿಯೋ ತೆಗೆಯುತ್ತಿದ್ದ ಸೈಕೋಪಾತ್ ನನ್ನ ಜಯನಗರ ಪೊಲೀಸರು ಬಂಧಿಸಿದ್ದಾರೆ‌.

ಪ್ರಸನ್ನ ಬಂಧಿತ ಆರೋಪಿಯಾಗಿದ್ದು,ಕಳೆದ‌ 31 ರಂದು ಜಯನಗರದ ಅಕ್ಕಮಹಾದೇವಿ ಪಾರ್ಕ್ ನಲ್ಲಿ ವಾಕಿಂಗ್ ಮಾಡುವ ಮಹಿಳೆಯರ ಫೋಟೋ ಹಾಗೂ ವೀಡಿಯೋವನ್ನ ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದ. ಈ ಹಿಂದೆ ಕೂಡ ಹೀಗೆ ಮಹಿಳೆಯರ ಫೋಟೋ ಮತ್ತು ವೀಡಿಯೋ ತೆಗೆದಿದ್ದ, ಆಗ ಮಹಿಳೆಯರು ವಾರ್ನ್ ಮಾಡಿದ್ದರು. ‌

ಇಷ್ಟಾದರೂ ಬುದ್ದಿ ಕಲಿಯದೆ ಮತ್ತೆ ತನ್ನ ಹಳೆ ಚಾಳಿ ಮುಂದುವರೆಸಿದ್ದ.‌ ಹೀಗಾಗಿಯೇ ಈತನನ್ನ ಹಿಡಿದು ಮೊಬೈಲ್ ತೆಗೆದು ಕೊಂಡು ಪರಿಶೀಲನೆ ನಡೆಸಿದ್ದ ಮಹಿಳೆಯರು, ಮೊಬೈಲ್ ನಲ್ಲಿ ಹಲವು ಮಹಿಳೆಯರ ವೀಡಿಯೋ ಹಾಗೂ ಫೋಟೋಗಳು ಪತ್ತೆಯಾಗಿವೆ.ತಕ್ಷಣವೇ ಆರೋಪಿಯನ್ನ ಜಯನಗರ ಪೊಲೀಸರಿಗೆ ಸ್ಥಳೀಯರು ಹಿಡಿದು ಕೊಟ್ಟಿದ್ದಾರೆ.

Edited By : PublicNext Desk
Kshetra Samachara

Kshetra Samachara

04/04/2022 02:03 pm

Cinque Terre

950

Cinque Terre

0

ಸಂಬಂಧಿತ ಸುದ್ದಿ