ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಎಂಎ ಯಲ್ಲಿ ಗಿರವಿಯಿಟ್ಟ ಚಿನ್ನ ಬಿಡಿಸಿಕೊಳ್ಳಲು ಅವಕಾಶ ಕಲ್ಪಿಸಿದ ಸಕ್ಷಮ ಪ್ರಾಧಿಕಾರ

ಬೆಂಗಳೂರು: ಐಎಂಎ ಸಂಸ್ಥೆಯಲ್ಲಿ ಗಿರವಿಯಿಟ್ಟ ಚಿನ್ನದ ಆಭರಣ ವನ್ನು ಏಪ್ರಿಲ್ 6ರಿಂದ ಹಿಂತಿರುಗಿಸಲು ರಾಜ್ಯ ಸರ್ಕಾರದ ಸಕ್ಷಮ ಪ್ರಾಧಿಕಾರದ ವಿಶೇಷಾಧಿಕಾರಿ ನಿರ್ಧರಿಸಿದ್ದಾರೆ.

ಚಿನ್ನದ ಸಾಲಗಾರರು ಬಾಕಿ ಸಾಲದ ಹಣ ಮತ್ತು ಭದ್ರತಾ ಶುಲ್ಕವನ್ನು ಏಪ್ರಿಲ್ 5ರ ಸಂಜೆ 5 ಗಂಟೆ ಒಳಗಾಗಿ ಪಾವತಿಸಿ ವೆಬ್ ಸೈಟ್ ನಲ್ಲಿ ಮಾಹಿತಿ ಹಂಚಿಕೊಳ್ಳಬೇಕು ಇದಕ್ಕಾಗಿ ಅಧಿಕಾರಿಗಳು ವೆಬ್ ಸೈಟ್ ಆಡ್ರೆಸ್ ಅನ್ನು ಬಿಡುಗಾಡಿ ಮಾಡಿದ್ದಾರೆ. https://imalaims.karnataka. gov.in/ ಲಿಂಕ್‌ನಲ್ಲಿ ಲಾಗಿನ್ ಆಗಿ 'ಕ್ಲೈಮ್ ಸಬ್‌ಮಿಷನ್ ಪ್ರೊಸೆಸ್' ಕ್ಲಿಕ್ ಮಾಡಿ, 'ಐಎಂಎ ಗೋಲ್ಡ್ ಲೋನ್ ಡೀಟೆಲ್ಸ್' ಆಯ್ಕೆ ಮಾಡಿದರೆ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಸಾಲದ ಮೊತ್ತವನ್ನು ಪ್ರಾಧಿಕಾರದ ಬ್ಯಾಂಕ್ ಖಾತೆಗೆ ಏನ್.ಇ.ಎಫ್.ಟಿ ಅಥವಾ ಆರ್.ಟಿ.ಜಿ.ಎಸ್ ಮೂಲಕವೇ ಪಾವತಿಸಬೇಕು. ಹೆಚ್ಚಿನ ಮಾಹಿತಿಯನ್ನು 080-2956 5353, 2956 6556, 2960 4556 ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬಹುದು. ಸಕ್ಷಮ ಪ್ರಾಧಿಕಾರದ ವಿಳಾಸ: ಅಂಬೇಡ್ಕರ್‌ ವಿವಿ ಟವರ್, 3ನೇ ಮಹಡಿ, ಪೋಡಿಯಂ ಬ್ಲಾಕ್, ಬೆಂಗಳೂರು ಎಂದು ವಿಶೇಷಾಧಿಕಾರಿ ಹೇಳಿದ್ದಾರೆ.

Edited By : PublicNext Desk
Kshetra Samachara

Kshetra Samachara

01/04/2022 01:40 pm

Cinque Terre

1.15 K

Cinque Terre

0

ಸಂಬಂಧಿತ ಸುದ್ದಿ