ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೊದಲ ಪತ್ನಿ ಇರುವಾಗಲೇ ಸೆಕೆಂಡ್ ಮ್ಯಾರೇಜ್- ಬಿಬಿಎಂಪಿ ಜಂಟಿ ಆಯುಕ್ತರ ವಿರುದ್ಧ ಎಫ್‌ಐಆರ್

ಬೆಂಗಳೂರು: ಮೊದಲ ಹೆಂಡತಿಗೆ ಡೈವರ್ಸ್ ಕೊಟ್ಟಿರುವುದಾಗಿ ಸುಳ್ಳು ಹೇಳಿ ಮತ್ತೊಬ್ಬ ಯುವತಿಯನ್ನ ಪ್ರೀತಿಸಿ ವಿವಾಹವಾಗಿ ವಂಚಿಸಿದ್ದ ಬಿಬಿಎಂಪಿ ಜಂಟಿ ಆಯುಕ್ತ ವೀರಭದ್ರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬಸವನಗುಡಿ ಮಹಿಳಾ ಠಾಣೆಯಲ್ಲಿ ಹಿಂದೆ ದಕ್ಷಿಣ ವಿಭಾಗ ಜಂಟಿ ಆಯುಕ್ತರಾಗಿದ್ದ ವೀರಭದ್ರಸ್ವಾಮಿ ವಿರುದ್ಧ ಜೆಪಿನಗರದ 44 ವರ್ಷದ ಮಹಿಳೆ ದೂರು ನೀಡಿದ್ದಾರೆ. 2020ರಲ್ಲಿ ಸಂತ್ರಸ್ತೆಗೆ ವೀರಭದ್ರಸ್ವಾಮಿ ಪರಿಚಯವಾಗಿತ್ತು. ಈ ನಡುವೆ ತಾನು ಪ್ರೀತಿಸುತ್ತಿರುವುದಾಗಿ ಪ್ರೇಮ ನಿವೇದನೆ ಮಾಡಿದ್ದ ವೀರಭದ್ರಸ್ವಾಮಿ, ಮೊದಲನೇ ಪತ್ನಿ ಹಾಗೂ ಕುಟುಂಬದವರಿಂದ 11 ವರ್ಷಗಳಿಂದ ಬೇರೆಯಾಗಿ ವಾಸಿಸುತ್ತಿದ್ದೇನೆ ಎಂದು ನಂಬಿಸಿದ್ದ.

ಇದನ್ನು ನಂಬಿದ್ದ ಸಂತ್ರಸ್ತೆ ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದರು. ಕಳೆದ ಫೆ.14ರಂದು ಬನ್ನೇರುಘಟ್ಟ ಮುಖ್ಯರಸ್ತೆಯ ದೇವಾಲಯವೊಂದರಲ್ಲಿ ಪರಿಚಿತರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಇಬ್ಬರೂ ವಿವಾಹವಾಗಿದ್ದರು. ಕೆಲ ದಿನಗಳ ಬಳಿಕ ವೀರಭದ್ರಸ್ವಾಮಿ ಮೊದಲನೇ ಪತ್ನಿ ಹಾಗೂ ಕುಟುಂಬಸ್ಥರೊಂದಿಗೆ ಸಂಸಾರ ನಡೆಸುವುದನ್ನು ಕಂಡು ಸಂತ್ರಸ್ತೆ ಪ್ರಶ್ನಿಸಿದ್ದರು. ಇದಾದ ಬಳಿಕ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗದೇ ವಂಚಿಸಿದ್ದಾನೆ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

Edited By : Vijay Kumar
Kshetra Samachara

Kshetra Samachara

30/03/2022 03:12 pm

Cinque Terre

2.01 K

Cinque Terre

0

ಸಂಬಂಧಿತ ಸುದ್ದಿ