ಬೆಂಗಳೂರು: ಮಂಗಳೂರಿನಿಂದ ರಾಜಧಾನಿಗೆ ಬಂದು ಎಂಡಿಎಂ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಕುಖ್ಯಾತ ರೌಡಿಶೀಟರ್ ಸೇರಿ ಇಬ್ಬರು ಆರೋಪಿಗಳನ್ನ ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ವಿಟ್ಲ ಮೂಲದ ಹಸನ್ ಸಾಧಿಕ್, ಬೆನ್ಸನ್ ಟೌನ್ ನಿವಾಸಿ ತಲ್ಲಾಖಾನ್ ಬಂಧಿತರಾಗಿದ್ದು ಇವರಿಂದ 23 ಗ್ರಾಂ ಎಂಡಿಎಂ ಡ್ರಗ್ಸ್ ಒಂದು ರಾಯಲ್ ಎನ್ ಫೀಲ್ಡ್ ಜಪ್ತಿ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಹೆಬ್ಬಾಳ ನಾಗೇನಹಳ್ಳಿ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕುಖ್ಯಾತ ಆರೋಪಿಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ, ಉಪ್ಪಿನಂಗಡಿ, ಪುತ್ತೂರು ಗ್ರಾಮಾಂತರ ಸೇರಿದಂತೆ ಆರೋಪಿ ವಿರುದ್ಧ ಕೊಲೆಯತ್ನ, ದೊಂಬಿ, ಅಪಹರಣ, ಕೊಲೆ ಬೆದರಿಕೆ ಸೇರಿದಂತೆ 17 ಪ್ರಕರಣ ದಾಖಲಾಗಿವೆ. ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದನೆ ಮಾಡುವುದಕ್ಕಾಗಿ ಪರಿಚಯಸ್ಥರಿಂದ ಎಂಡಿಎಂ ಡ್ರಗ್ಸ್ ಖರೀದಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದರು ಈ ಸಂಬಂದ ಇಬ್ಬರನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.
Kshetra Samachara
30/03/2022 01:52 pm