ಬೆಂಗಳೂರು : ಪಾರ್ಕ್ ಮಾಡಲಾಗಿದ್ದ ಈಚರ್ ವಾಹನವೊಂದು ನಾಪತ್ತೆಯಾಗಿ ಬಳಿಕ ಮಂಡ್ಯದಲ್ಲಿ ಪತ್ತೆಯಾಗಿತ್ತು. ಸದ್ಯ ತನ್ನ ವಾಹನಕ್ಕೆ ಬಂದ ಸ್ಥಿತಿ ಕಂಡು ಮಾಲೀಕ ಕಂಗಾಲಾಗಿ ಹೋಗಿದ್ದ. ಯಾಕಂದ್ರೆ ನಿತ್ಯ ಅನ್ನ ಹಾಕ್ತಿದ್ದ ಕ್ಯಾಂಟರ್ ನ್ನು ಖದೀಮರು ಪೀಸ್ ಪೀಸ್ ಮಾಡಿಟ್ಟಿದ್ದಾರೆ.
ಹೌದು KA 16 B 0783 ನಂಬರ್ ನ ಇದೇ ಈಚರ್ ವಾಹನ ಮಾಲೀಕ ಮಾರುತಿ ಎಂಬುವರಿಗೆ ಸೇರಿದ್ದು. ವಾಹನ ಚಾಲಕ ಮಾರ್ಚ್ 15 ರ ರಾತ್ರಿ ಕೊಟ್ಟಿಗೆ ಪಾಳ್ಯದ ತನ್ನ ಮನೆಯ ಮುಂದೆ ನಿಲ್ಲಿಸಿದ್ದ ಇದನ್ನು ಕಳ್ಳರು ಎಗರಿಸಿದ್ದರು.
ಇನ್ನು ಗಾಡಿ ಜಾಡು ಹಿಡಿದ ಹೊರಟ ಪೊಲೀಸರಿಗೆ ಈಚರ್ ವಾಹನ ಸಿಕ್ಕಿದ್ದು ಪೀಸ್ ಪೀಸ್ ಆಗಿ.
ಟ್ಯಾಂಕರ್ ಕದ್ದಿದ್ದ ಮಜರ್ ಅಹಮ್ಮದ್ ಮಂಡ್ಯದಲ್ಲಿರುವ ಒಂದು ಗ್ಯಾರೆಜ್ ಗೆ ತೆರಳಿ ಇಡೀ ಈಚರ್ ವಾಹನವನ್ನು ಗುರುತೇ ಸಿಗದಂತೆ ಪೀಸ್ ಪೀಸ್ ಮಾಡಿ ಟೈರ್,ಬಾಡಿ, ಸೇರಿದಂತೆ ಚಾರ್ಸಿ ಬಿಟ್ಟು ಎಲ್ಲವನ್ನು ಬೇರ್ಪಡಿಸಿದ್ದ.
ಇನ್ನೇನು ಗುಜರಿಗೆ ಹಾಕಬೇಕು ಅನ್ನೋ ಹಂತಕ್ಕೆ ತಂದುಬಿಟ್ಟಿದ್ದ. ಇಷ್ಟೆಲ್ಲಾ ಮಾಡಿದ್ದ ಕಳ್ಳ ಜಿಪಿಎಸ್ ನ ಹಾಗೇ ಬಿಟ್ಟಿದ್ದ.
ಜಿಪಿ ಎಸ್ ಲೊಕೇಷನ್ ನಿಂದ ತಕ್ಷಣ ಕಾರ್ಯಪ್ರವೃತ್ತರಾದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಮಂಡ್ಯ ಪೊಲೀಸರ ಸಹಾಯ ಪಡೆದು ಗ್ಯಾರೆಜ್ ಒಂದರಲ್ಲಿ ಕ್ಯಾಂಟರ್ ಇರುವ ಜಾಗವನ್ನು ಬೆಳಗ್ಗೆ 6 ಗಂಟೆ ಹೊತ್ತಿಗೆ ಪತ್ತೆ ಮಾಡಿದ್ದಾರೆ.
ಸದ್ಯ ಆರೋಪಿ ಮಜರ್ ಅಹಮ್ಮದ್ ರನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರಿಗೆ ಈ ಹಿಂದೆಯೂ ಇದೇ ರೀತಿ ಕಳ್ಳತನ ಕೇಸ್ ನಲ್ಲಿ ಭಾಗಿಯಾಗಿರೋದು ಗೊತ್ತಾಗಿದೆ.
ಇತ್ತ ಪಳಯುಳಿಕೆಯಂತಾಗಿದ್ದ ಈಚರ್ ವಾಹನವನ್ನು ಮಾಲೀಕರು ಮತ್ತೆ ರೆಡಿ ಮಾಡಿಸ್ತಿದ್ದಾರೆ.
ಶ್ರೀನಿವಾಸ್ ಚಂದ್ರ,
ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
29/03/2022 04:10 pm