ಬೆಂಗಳೂರು: ಹೆಂಡತಿಯ ಜೊತೆ ಕಾಶ್ಮೀರ ಟ್ರಿಪ್ ಹೋಗಲು ಕಳ್ಳತನ ಮಾಡಿ ಆರೋಪಿ ಅರೆಸ್ಟ್ ಆಗಿರೋ ಘಟನೆ ಗೋವಿಂದರಾಜ ನಗರದಲ್ಲಿ ನಡೆದಿದೆ.
ಗೋವಿಂದರಾಜನಗರ ಪೊಲೀಸರು ಆರೋಪಿ ಇಮ್ರಾನ್ ಖಾನ್ ನನ್ನ ಬಂಧಿಸಿ 8. 6 ಲಕ್ಷ ಮೌಲ್ಯದ 147 ಗ್ರಾಂ ಚಿನ್ನ ಮತ್ತು 1 ಕೆಜಿ 517 ಗ್ರಾಂ ಬೆಳ್ಳಿ ವಸ್ತುಗಳನ್ನು ಸೀಜ್ ಮಾಡಿದ್ದಾರೆ. ಮೂಲತಃ ಕೆ ಆರ್ ಪುರಂ ನಿವಾಸಿಯಾಗಿರೋ ಇಮ್ರಾನ್ ಖಾನ್, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ. ಇವನಿಗೆ ಪತ್ನಿ ಎಂದರೆ ಬಲು ಪ್ರೀತಿ . ಇದೇ ಕಾರಣಕ್ಕೆ ಕಳ್ಳತನ ಮಾಡಿಯೇ ಪತ್ನಿಯನ್ನ ಕಾಶ್ಮೀರಕ್ಕೂ ಕರೆದೊಯ್ದಿದ್ದ. ಕಾಶ್ಮೀರ ಟ್ರಿಪ್ ಮಾಡಿ ಸುಮ್ಮನಾಗಲಿಲ್ಲ. ಪತ್ನಿ ಮೇಲಿನ ಪ್ರೀತಿಗಾಗಿ ಕದಿಯೋದನ್ನ ಜಾಸ್ತಿ ಮಾಡಿಕೊಂಡಿದ್ದ ಇಮ್ರಾನ್ ನಸೀಬು ಕೈ ಕೊಟ್ಟು ಖಾಕಿ ಕೈಗೆ ಲಾಕ್ ಆಗಿದ್ದಾನೆ.
ಕಳ್ಳತನದ ವಿಚಾರ ಪತ್ನಿಗೆ ತಿಳಿದಿದೆಯೋ ಇಲ್ವೋ ಎಂಬ ಬಗ್ಗೆ ಮಾಹಿತಿಯಿಲ್ಲ. ಗುಜರಿ ಕೆಲಸ ಮಾಡ್ತಿದ್ದ ಈತ , ತನ್ನ ಮನೆಯ ಬ್ಯಾಕ್ ಡೋರ್ ನಲ್ಲಿ ಒಂದು ಕಿಂಡಿಯನ್ನು ಮಾಡಿಕೊಂಡಿದ್ನಂತೆ. ಅದು ಪೊಲೀಸರು ಬಂದ್ರೆ ಎಸ್ಕೇಪ್ ಆಗೋಕೆ ಅಂತ. ಇನ್ನು ಈತನಿಂದ ಒಂದು ಬೈಕ್ ಕೂಡ ಜಪ್ತಿಯಾಗಿದ್ದು, ಮತ್ತಷ್ಟು ಕದ್ದಿರುವ ವಸ್ತುಗಳನ್ನ ರಿಕವರಿ ಮಾಡಬೇಕಾಗಿರುವ ಕಾರಣ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ .
ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ, ಪಬ್ಲಿಕ್ ನೆಕ್ಸ್ಟ್
PublicNext
28/03/2022 03:33 pm