ಬೆಂಗಳೂರು:ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂದ್ರೆ ಇದೆ ಇರಬಹುದು. ಕಂಡೋರ ದುಡ್ಡಲ್ಲಿ ಪುಗ್ಸಟ್ಟೆ ಮೋಜು ಮಸ್ತಿ ಮಾಡುತ್ತಾ ಹೇಗೆ ಎಂಜಾಯ್ ಮಾಡ್ತಿದ್ದೋರು ದಶಕದ ನಂತರ ಕಂಬಿ ಹಿಂದೆ ಈಗ ಸರಿದಿದ್ದಾರೆ. ಅಂದ ಹಾಗೆ ಈ ವ್ಯಕ್ತಿಯ ಹೆಸರು ಜೀತೆಂದ್ರ ಕುಮಾರ್ ಸಾರಂಗಿ. ಮೈಸೂರು ಮೂಲದ ಈತ ನಗರದ ನಿಷ್ಕ ವಿವಿದ್ದೋದೇಶ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕನಾಗಿದ್ದ. ಅಂದಹಾಗೆ ಸೊಸೈಟಿಯಲ್ಲಿ ಅಧಿಕ ಬಡ್ಡಿ ಕೊಡ್ತಿವಿ ಅಂತ ಸಾವಿರಾರು ಜನರಿಂದ ಹಣ ಕಟ್ಟಿಸಿಕೊಂಡು ಬಳಿಕ ಉಂಡೆನಾಮ ಹಾಕಿದ್ರಂತೆ, ಅಲ್ಲದೇ ಮೆಚ್ಯುರಿಟಿ ಹಣವು ಕೊಡದೆ ವಂಚಿಸಿ ಎಸ್ಕೇಪ್ ಆಗಿದ್ದಾರೆ.
2010 ರಲ್ಲೆ ಕೋ ಆಪರೇಟಿವ್ ಸೊಸೈಟಿ ವಂಚನೆ ಬೆಳಕಿಗೆ ಬಂದಿದ್ದು, ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ಬಳಿಕ 2013 ರಲ್ಲಿ ಪೊಲೀಸರು ತನಿಖೆ ನಡೆಸಿ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ರಂತೆ. ನಂತರ ಆರೋಪಿಗಳ ಮೇಲೆ ವಾರಂಟ್ ಜಾರಿಯಾದ್ರು ಸಹ ಖಾಕಿ ಕಣ್ಣಿಗೆ ಬೀಳದೆ ನಾಪತ್ತೆಯಾಗಿದ್ರು. ಇತ್ತೀಚಿಗೆ ಹಣ ಕಟ್ಟಿದ ವ್ಯಕ್ತಿಯೊಬ್ಬರು ಮತ್ತೊಂದು ಕೇಸ್ ದಾಖಲು ಮಾಡಿದ್ದಾರೆ. ಈ ವೇಳೆ ಪೊಲೀಸರು ಶತಾಯ ಗತಾಯ ಆರೋಪಿಗಳನ್ನ ಬಂಧಿಸಲು ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಅಂಕೋಲಾ ಪೊಲೀಸರು ಇದೇ ವಂಚನೆ ಸಂಬಂಧ ಇಬ್ಬರನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಕೂಡಲೇ ಜಯನಗರ ಇನ್ಸ್ ಪೆಕ್ಟರ್ ಮಂಜುನಾಥ್ ಬಾಡಿ ವಾರೆಂಟ್ ಮೇಲೆ ಇಬ್ಬರನ್ನ ಕರೆತಂದು ವಿಚಾರಣೆ ನಡೆಸಿದಾಗ ಉಳಿದವರ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇದೀಗ ಜಯನಗರ ಪೊಲೀಸರು ಜೀತೆಂದ್ರ ಕುಮಾರ್, ಕೃಷ್ಣಪ್ಪ, ಧನಂಜಯ, ಚಂದ್ರ ಮತ್ತು ಪುಟ್ಟರಾಜು ಎಂಬುವರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಪೊಲೀಸರು ಐವರನ್ನ ತೀವ್ರ ವಿಚಾರಣೆ ನಡೆಸಿದ್ದಾರೆ. ಮೋಸ ಹೊದ ಜನರು ತಮ್ಮ ಬಳಿ ಹಣ ಹೂಡಿಕೆ ಮಾಡಿರೋ ಬಗ್ಗೆ ದಾಖಲೆಗಳು ಇದ್ದರೆ ಪೊಲೀಸರನ್ನ ಸಂಪರ್ಕಿಸಲು ಸೂಚಿಸಿದ್ದಾರೆ. ಈಗಾಗಲೇ ಸೊಸೈಟಿಯ ನಿರ್ದೇಶಕರು ಸೇರಿ 25 ಜನರ ಮೇಲೆ ಎಫ್ಐಆರ್ ದಾಖಲಿಸಿರೋ ಪೊಲೀಸರು ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
PublicNext
26/03/2022 10:19 pm