ಬೆಂಗಳೂರು: ವಸಿಷ್ಠ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನ ನೂರಾರು ಕೋಟಿ ವಂಚನೆ ಪ್ರಕರಣದಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎನ್.ವೆಂಕಟನಾರಾಯಣ ಹಾಗೂ ಅವರ ಪುತ್ರ ಕೃಷ್ಣಪ್ರಸಾದ್ ಈಗ ಪೊಲೀಸರಿಗೆ ಶರಣಾಗಿದ್ದಾರೆ. ಹನುಮಂತನಗರ ಪೊಲೀಸರಿಗೆ ಅಪ್ಪ- ಮಗ ಇಬ್ಬರು ಶರಣಾಗಿದ್ದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ನಿಗಮದ ಡೆಪ್ಯೂಟಿ ಜನರಲ್ ಮ್ಯಾನೇಜರ್ ನಾರಾಯಣ್ ಹೆಗ್ಡೆ ನೀಡಿದ ದೂರಿನನ್ವಯ ಕೆ.ಎನ್. ವೆಂಕಟನಾರಾಯಣ್ ಸೇರಿ ಶ್ರೀ ವಶಿಷ್ಠ ಕೋ-ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಗೆ ಸಂಬಂಧಿಸಿದ 56 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಪ್ರಕರಣ ದಾಖಲಾದಾಗಿನಿಂದ .ಕೆ ಎನ್.ವೆಂಕಟನಾರಾಯಣ್ ಹಾಗೂ ಅವರ ಪುತ್ರ ಕೃಷ್ಣಪ್ರಸಾದ ಠೇವಣಿದಾರರಿಗೆ ಹಣ ಕೊಡುವ ಭರವಸೆ ನೀಡಿದ್ರು. ಆದರೆ ಪ್ರಕರಣ ದಾಖಲಾಗಿ ವರುಷ ಕಳೆದ್ರು ಹಣ ವಾಪಸ್ ನೀಡಿರಲಿಲ್ಲ. ಹೀಗಾಗಿ ಗುರುವಾರ ನ್ಯಾಯಾಲಯಕ್ಕೆ ಹಾಜರಾಗಿ ಶರಣಾಗಿದ್ದು, ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
PublicNext
26/03/2022 09:27 pm