ಯಲಹಂಕ: ಕೆಲಸ ಮಾಡೋ ಕಡೆ ಸಂಸ್ಥೆ ರೂಲ್ಸ್ ಪಾಲಿಸಲಿಲ್ಲ ಅಂದ್ರೆ ಕೆಲಸದಿಂದ ತೆಗೆಯೋದು ಮಾಮೂಲಿ.ಆದರೆ ಇಲ್ಲೊಬ್ಬ ಕೆಲಸದಿಂದ ತೆಗೆದ್ರು ಅಂತ ಗ್ಯಾಂಗ್ ಕಟ್ಟಿಕೊಂಡು HR ನನ್ನೆ ಕೊಲೆ ಮಾಡಲು ಹೋಗಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಇವನೇ ನೋಡಿ ಆ ಖದೀಮ ನೌಕರು. ಹೆಸರು ಮಧು ಅಂತ. ವೈಟ್ ಫೀಲ್ಡ್ ಸಾಸ್ಮೋಸ್ ಎಂಬ ಕಂಪನಿ ನೌಕರ.ಈ ಕಂಪನಿಯ ಹೆಚ್.ಆರ್ ಕೊಲೆಗೆ, ಸ್ನೇಹಿತರ ಜೊತೆ ಸೇರಿ ಪ್ರಯತ್ನಿಸಿ ಬಾಗಲೂರು ಪೊಲೀಸ್ರಿಂದ ಅರೆಸ್ಟ್ ಆಗಿದ್ದಾನೆ.
Yes ಮಧು ರಕ್ಷಣಾ ಸಾಮಾಗ್ರಿಗಳನ್ನ ಪೂರೈಸುವ ಸಾಸ್ಮೋಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಅಲ್ಲಿಯ ರೂಲ್ಸ್ ಗಳನ್ನ ಪಾಲಿಸದ ಕಾರಣ ಕಂಪನಿಯ ಹೆಚ್.ಆರ್.ರಾಜಶೇಖರ್ ರೈ ಎಂಬುವರು ಈತನನ್ನ ಕೆಲಸದಿಂದ ವಜಾ ಮಾಡಿದ್ದರು.
ಇದ್ರಿಂದ ಕೋಪಗೊಂಡ ಮಧು ತನ್ನ ಸ್ನೇಹಿತರಾದ ಅಲೆಕ್ಸಾಂಡರ್, ಚಿನ್ನರಾಜ್ ಹಾಗೂ ಇಮ್ರಾನ್ ಎಂಬುವರ ಜೊತೆ ಒಂದು ತಿಂಗಳ ಕಾಲ ಪ್ಲಾನ್ ಮಾಡಿ, ರಾಜಶೇಖರ ರೈ ಕೊಲೆ ಮಾಡಲು ಯತ್ನಿಸಿದ್ದರು. ಇದೆ ತಿಂಗಳು ಎಂಟನೆ ತಾರೀಖು ಕಾರಿನಲ್ಲಿ ಬರುತ್ತಿದ್ದ ರಾಜಶೇಖರ್ ಮೇಲೆ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ಮಾರಕಾಸ್ತ್ರಗಳೊಂದಿಗೆ ಅಟ್ಯಾಕ್ ಮಾಡಿದ್ದರು. ಆದರೆ ಅದೃಷ್ಟವಶಾತ್ ತಪ್ಪಿಸಿಕೊಂಡಿದ್ದ ರಾಜಶೇಖರ್, ಬಾಗಲೂರು ಠಾಣೆಗೆ ಹೋಗಿ ದೂರು ನೀಡಿದ್ದರು.
ಸದ್ಯ ಪ್ರಕರಣ ದಾಖಲಿಸಿಕೊಂಡ ಬಾಗಲೂರು ಪೊಲೀಸ್ರು, ನಾಲ್ವರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಇದ್ದ ಕೆಲಸವನ್ನು ಕಳೆದುಕೊಂಡು ಮಾಡಬಾರದು ಮಾಡಲು ಹೋಗಿ ಮಧು ಈಗ ಪರಪ್ಪನ ಆಗ್ರಹಾರ ಸೇರಿದ್ದಾನೆ.
PublicNext
25/03/2022 09:48 pm