ಬೆಂಗಳೂರು: ರಾಜಧಾನಿಯಲ್ಲಿ ಹಾಡುಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿಗಳು ಗನ್ ತೋರಿಸಿ ನಗ ನಾಣ್ಯ ದೋಚಿದ್ದ ಘಟನೆ ಯಶವಂತಪುರ ಠಾಣೆಯಲ್ಲಿ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಸುರೇಶ್ ಆ್ಯಂಡ್ ಟೀಂ ಪ್ರಕರಣ ದಾಖಲಾದ ಕೆಲ ದಿನಗಳಲ್ಲೇ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಇನ್ನೂ ಆರೋಪಿಗಳು ಮಹಿಳೆಯರಿದ್ದ ಮನೆಗೆ ನುಗ್ಗಿ ಲೈಟರ್ ಗನ್ ತೋರಿಸಿ ದರೋಡೆ ಮಾಡಿದ್ರು.
ಬಾಗಿಲು ಬಡಿದು ಏಕಾಏಕಿ ಮನೆಯ ಒಳಗೆ ನುಗ್ಗಿದ ದರೋಡೆಕೋರರು, ಮನೆ ಮಾಲೀಕರು ಕೂಗಾಡಿದಾಗ ಲೈಟರ್ ಗನ್ ತೋರಿಸಿ ಬೆದರಿಸಿ ಮನೆಯಲ್ಲಿದ್ದ ಚಿನ್ನಾಭರಣ, ಮೊಬೈಲ್ ದರೋಡೆ ಮಾಡಿ ಎಸ್ಕೇಪ್ ಆಗಿದ್ರು. ರಾಜೇಶ್ವರಿ ಕುಟುಂಬದಿಂದ ದೂರು ಕೂಡ ದಾಖಲಾಗಿತ್ತು.
ಮಹಜರ್ ವೇಳೆ ಸಿಕ್ಕ ಸ್ಥಳದಲ್ಲಿ ದೊರೆತ ಚೀಟಿಯಿಂದ ಪೊಲೀಸರು ಆರೋಪಿಗಳ ಜಾಡು ಹಿಡಿದಿದ್ರು. ಚೀಟಿಯಲ್ಲಿದ್ದ ವಿಳಾಸ ಆಧರಿಸಿ ಆರೋಪಿಗಳ ಪತ್ತೆ ಮಾಡಿದ್ತು. ಮನೋಹರ್ ಸಿಂಗ್, ಅಮಿತ್, ರಮೇಶ್ ನ ಬಂಧಿಸಿದ್ದಾರೆ. ಇದ್ರಲ್ಲಿ ಮನೋಹರ್ ಸಿಂಗ್ ಅಂತರ್ ರಾಜ್ಯ ಕಳ್ಳನಾಗಿದ್ದು, 15 ದಿನಗಳ ಹಿಂದೆಯಷ್ಟೆ ಉತ್ತರ ಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದ.
ಈ ಹಿಂದೆ ಕೂಡಾ ಗುಜರಾತಿನಲ್ಲಿ ಡಕಾಯಿತಿ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಆರೋಪಿ ಜಾಮೀನಿನ ಮೇಲೆ ಹೊರ ಬಂದಿದ್ದ. ಸದ್ಯ ಬಂಧಿತರಿಂದ 1 ಚಿನ್ನದ ಓಲೆ, ದರೋಡೆಗೆ ಬಳಸಿದ್ದ ಲೈಟರ್ ಗನ್ ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆಗೂ ಪೊಲೀಸ್ರು ಬಲೆ ಬೀಸಿದ್ದಾರೆ.
Kshetra Samachara
25/03/2022 12:42 pm