ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡೇ ಟೈಂ ಕಂಪನಿ ಸೆಕ್ಯೂರಿಟಿ, ನೈಟ್ ಟೈ ಹುಂಡಿ ಚೋರ

ಬೆಂಗಳೂರು: ಡೇ ಟೈಂ‌‌ನಲ್ಲಿ ಗೇಟ್ ಕಾಯೋ ಕೆಲಸ ಮಾಡ್ತಿದ್ದ ಸೆಕ್ಯೂರಿಟಿ, ರಾತ್ರಿ ಆದ್ರೆ ದೇವಸ್ಥಾನದ ಹುಂಡಿ ಹಣ ಕದಿಯುತ್ತಿದ್ದ. ಸದ್ಯ ಅಸ್ಸಾಂ ಮೂಲದ ಹುಂಡಿ ಕಳ್ಳನನ್ನು ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ವೈಟ್ ಫೀಲ್ಡ್ ‌ನಿವಾಸಿಯಾಗಿರುವ ಅಬ್ದುಲ್ ಫಜಲ್ ಅಹ್ಮದ್ ಬಂಧಿತ ಆರೋಪಿಯಾಗಿದ್ದು, ಕಳೆದ‌ ಮೂರು ವರ್ಷಗಳಿಂದ‌ ನಗರದಲ್ಲಿ ವಾಸವಾಗಿದ್ದಾನೆ.

ಖಾಸಗಿ ಕಂಪೆನಿಯಲ್ಲಿ ಸೆಕ್ಯೂರಿಟಿಯಾಗಿ ಕೆಲಸ‌ ಮಾಡುತ್ತಿದ್ದ ಈತಬಸುಲಭವಾಗಿ ಹಣ‌ ಸಂಪಾದನೆ ಮಾಡಲು ಅಡ್ಡದಾರಿ ಹಿಡಿದಿದ್ದ. ನೈಟ್ ಟೈಂ ಟೆಂಪಲ್‌ ರನ್ ಮಾಡ್ತಿದ್ದ ಈತ ದೇವಸ್ಥಾನ ಮುಂಭಾಗದಲ್ಲಿ ಹುಂಡಿಯಲ್ಲಿ ಹಣ ದೋಚುವ ಪ್ಲ್ಯಾನ್ ಮಾಡಿಕೊಂಡಿದ್ದ.

ಅದು ಈಸಿಯಾಗಿ ಯಾವ ಹುಂಡಿ ಹೊಡಿಬಹುದು ಅಂತ ಪ್ಲಾನ್ ಮಾಡಿ ಅದಕ್ಕೆ ಬೇಕಾದ ಟೂಲ್ಸ್ ಸಮೇತ ದೇವಸ್ಥಾನಕ್ಕೆ ಎಂಟ್ರಿ ಕೊಡ್ತಿದ್ದ. ನಂತರ ಹುಂಡಿ ಹೊಡೆದು ಅದ್ರಲ್ಲಿದ್ದ ಕಾಣಿಕೆ‌ಹಣ ದೋಚಿ ಪರಾರಿಯಾಗ್ತಿದ್ದ. ಇತ್ತೀಚೆಗೆ ಮಾರತ್ ಹಳ್ಳಿ‌ ಪೊಲೀಸ್ ಠಾಣಾ ವ್ಯಾಪ್ತಿಯ ಮಾರಮ್ಮ ದೇವಸ್ಥಾನದ ಹುಂಡಿಯಲ್ಲಿ ದೋಚಿದ್ದ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಸಬ್ ಇನ್‌ಸ್ಪೆಕ್ಟರ್ ಅಶೋಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ನಗರದ ವಿವಿಧ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಸದ್ದುಗುಂಟೆ ಪಾಳ್ಯ, ಆಡುಗೋಡಿ,ವೈಟ್ ಫಿಲ್ಡ್, ಮಾರತಹಳ್ಳಿಯ ದೇವಸ್ಥಾನದಲ್ಲಿ ಕೈಚಳಕ ತೋರಿಸಿದ್ದ. ಸದ್ಯ ಆರೋಪಿ ಬಂಧನದಿಂದ ಐದು ಪ್ರಕರಣ ಬೆಳಕಿಗೆ ಬಂದಿದೆ.

Edited By : PublicNext Desk
Kshetra Samachara

Kshetra Samachara

24/03/2022 08:05 pm

Cinque Terre

950

Cinque Terre

0

ಸಂಬಂಧಿತ ಸುದ್ದಿ