ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದರೋಡೆಗೆ ಸಂಚು : ಐವರು ಆರೋಪಿಗಳು ಅರೆಸ್ಟ್

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೌಡಿಶೀಟರ್ ನಂದೀಶ್ ಸೂಚನೆಯಂತೆ ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಗಳಾದ ನಂದೀಶ್ ಹಾಗೂ ಸ್ಪಾಟ್ ನಾಗ ವಿವಿಧ ಅಪರಾಧ ಪ್ರಕರಣಗಳಲ್ಲಿ ಜೈಲಿನಲ್ಲಿದ್ದಾರೆ. ಕಂಬಿ ಹಿಂದಿದ್ದರೂ ಒಳಗಿನಿಂದಲೇ ತಮ್ಮ ಸಹಚರರ ಮೂಲಕ ಹಲ್ಲೆ, ಸುಲಿಗೆ, ದರೋಡೆ ಸೇರಿದಂತೆ ಕ್ರೈಂ ಚಟುವಟಿಕೆಗಳನ್ನ ಆಪರೇಟ್ ಮಾಡುತ್ತಿದ್ದರು.

ಅದೇ ರೀತಿ ಮಾರ್ಚ್ 22 ರಂದು ಕಮಲಾನಗರದ ಬಿಬಿಎಂಪಿ ಪಾರ್ಕ್ ಬಳಿ ದರೋಡೆಗೆ ಸಂಚು ರೂಪಿಸುತ್ತಿದ್ದ ಭರತ್, ಮಂಜುನಾಥ್, ಕಿರಣ್, ಭಾನುಪ್ರಕಾಶ್ ಹಾಗೂ ಮನು ಎಂಬುವರನ್ನು ಬಂಧಿಸಿ ಮಾರಕಾಸ್ತ್ರಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

23/03/2022 02:58 pm

Cinque Terre

1.03 K

Cinque Terre

0

ಸಂಬಂಧಿತ ಸುದ್ದಿ