ಬೆಂಗಳೂರು: ಚಂದ್ರಾಲೇಔಟ್ ಮನೆಯಲ್ಲಿ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
64 ವರ್ಷದ ಮೊಹಮ್ಮದ್ ಸಾವನ್ನಪ್ಪಿದ್ದು, ಕಳೆದ 19 ರಂದು ಗಂಗೊಂಡನಹಳ್ಳಿಯಲ್ಲಿ ಸಿಲಿಂಡರ್ ಸ್ಫೋಟವಾಗಿತ್ತು.ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮೊಹಮ್ಮದ್ ಸಿಗರೇಟ್ ಹಚ್ಚುವ ವೇಳೆ ಸಿಲಿಂಡರ್ ಗೆ ತಗಲಿ ಬ್ಲಾಸ್ಟ್ ಆಗಿತ್ತು.
ಈ ವೇಳೆ ಮೊಹಮ್ಮದ್ ದೇಹಕ್ಕೆ ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಗಾಯಾಳು ಮೊಹಮ್ಮದ್ ನನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ರು. ಇಂದು ಚಿಕಿತ್ಸೆ ಫಲಿಸದೇ ಮೊಹಮ್ಮದ್ ಸಾವನ್ನಪ್ಪಿದ್ದಾರೆ.
Kshetra Samachara
22/03/2022 05:14 pm