ಬೆಂಗಳೂರು: ಅವ್ರು ಚಿನ್ನದಂಗಡಿಗಳಲ್ಲಿ ಕೆಲಸ ಮಾಡಿದೋರು. ಚಿನ್ನ ತಯಾರಿಕೆ, ಎಲ್ಲೆಲ್ಲಿ ಏನೆಲ್ಲಾ ವ್ಯವಹಾರ ನಡೆಯುತ್ತಿತ್ತು ಅನ್ನೋದನ್ನ ಅಬ್ಸರ್ವ್ ಮಾಡಿದೋರು. ದುರಾಸೆಯಿಂದಾಗಿ ಗೋಲ್ಡ್ ಮನ್ ಗಳನ್ನೇ ಟಾರ್ಗೆಟ್ ಮಾಡಿ ಚಿನ್ನಾಭರಣ ದೋಚೋಕೆ ಶುರು ಮಾಡಿದ್ರು. ಪೂಜೆ ನೆಪ ಹೇಳಿ ಹಾಡಹಗಲೇ ನಗ ದೋಚಿದ್ದವರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ.
ವ್ಯಕ್ತಿಯೊಬ್ಬರ ಬಳಿ 1.7 ಕೆ.ಜಿ. ಚಿನ್ನಾಭರಣ ದೋಚಿದ್ದ ಖದೀಮರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ರಾಜಾ ಅಲಿ, ನಾದಿರ್ ಜೈಬಿ ಬಂಧಿತರಾಗಿದ್ದು, ಫೆ.12ರಂದು ಪ್ರಭುರಾಮ್ ಎಂಬವರ ಬಳಿ ಬಂದು ಪೂಜೆ ಅಂತ ಯಾಮಾರಿಸಿ ಬೆದರಿಸಿ ಚಿನ್ನಾಭರಣ ದೋಚಿದ್ರು.
ಚೇತನ್ ಎಂಬವರು ರಾಜಾಜಿನಗರದ ಒಬ್ಬ ಗೋಲ್ಡ್ ಮನ್. ತನ್ನ ಸಿಬ್ಬಂದಿ ಪ್ರಭುರಾಮ್ ನನ್ನು ಚಿನ್ನಾಭರಣಕ್ಕೆ ಹಾಲ್ ಮಾರ್ಕ್ಸ್ ಹಾಕಿಸಿ ಬರುವಂತೆ ಫೆ. 12ರಂದು ಪೇಟೆಗೆ ಕಳಿಸಿದ್ದ. ಪ್ರಭುರಾಮ್ ನನ್ನು ಹಿಂಬಾಲಿಸಿದ್ದ ಆರೋಪಿಗಳು, ಆತನ ಬಳಿ ತಾವು ಪೂಜಾರಿಗಳು ಎಂದು ನಂಬಿಸಿ ಚಿನ್ನಕ್ಕೆ ಪೂಜೆ ಮಾಡುವ ನೆಪದಲ್ಲಿ ಸೈಡಿಗೆ ಕರೆದೊಯ್ದು ಬ್ಯಾಗ್ ನಲ್ಲಿ ಗನ್ ಇದೆ, ಚಿನ್ನಾಭರಣ ಕೊಡು. ಇಲ್ಲದಿದ್ದರೆ, ಕೊಲೆ ಮಾಡ್ತೀವಿ ಎಂದು ಬೆದರಿಸಿ 1.670 ಕೆ.ಜಿ. ಚಿನ್ನಾಭರಣ ದೋಚಿ ಪರಾರಿಯಾಗಿದ್ರು. ಪೊಲೀಸರೀಗ ಖದೀಮರನ್ನು ಬಂಧಿಸಿದ್ದು, ಬೇರೆ ಬೇರೆ ಠಾಣಾ ವ್ಯಾಪ್ತಿಗಳಲ್ಲೂ ದುರ್ಬುದ್ಧಿ ತೋರಿಸಿರೋದು ಗೊತ್ತಾಗಿದೆ.
- ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
19/03/2022 09:51 pm