ನೆಲಮಂಗಲ: ಹೆದ್ದಾರಿ ಡಾಬಾದಲ್ಲಿ ಗಾಂಜಾ, ಬುಕಿ ಪೌಡರ್ (ದೋಡಾ) ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ನೆಲಮಂಗಲ ಅಬಕಾರಿ ಅಧಿಕಾರಿಗಳು ದಾಳಿ ನೆಡೆಸಿ ಓರ್ವ ಗಾಂಜಾ ಪೆಡ್ಲರ್‌ನನ್ನು ಬಂಧಿಸಿದ್ದಾರೆ.
ಇನ್ನೂ ನೆಲಮಂಗಲ ತಾಲ್ಲೂಕು ದೊಡ್ಡೇರಿ ಗ್ರಾಮದ ಹೆಚ್.ಪಿ ಜಮ್ಮು ಪಂಜಾಬಿ ಡಾಬಾದಲ್ಲಿ ಲಾರಿ ಚಾಲಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಜಮ್ಮು ಮೂಲದ 42 ವರ್ಷ ವಯಸ್ಸಿನ ಶಂಶುದ್ದೀನ್ ಎಂಬಾತನನ್ನು ಬಂಧಿಸಲಾಗಿದೆ. ಸದ್ಯ ಈತ ದಾಬಸ್ ಪೇಟೆಯಲ್ಲಿ ವಾಸವಿದ್ದಾನೆ. ಇನ್ನು ಬಂಧಿತನಿಂದ ಸುಮಾರು 450 ಗ್ರಾಂನಷ್ಟು ಗಾಂಜಾ, 450 ಗ್ರಾಂನಷ್ಟು ಬುಕಿ ಪುಡಿಯನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಅಲ್ಲದೆ ಆರೋಪಿ ಶಂಶುದ್ದೀನ್ ವಿರುದ್ಧ NDPS ಕಾಯ್ದೆ ಅಡಿ ನೆಲಮಂಗಲ ಅಬಕಾರಿ ಉಪನಿರೀಕ್ಷಕರ ಕಛೇರಿಯಲ್ಲಿ ಪ್ರಕರಣ ದಾಖಲಿಸಿದ್ದು, ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Kshetra Samachara
19/03/2022 12:09 pm