ಬೆಂಗಳೂರು: ಸೆಕೆಂಡ್ ಹ್ಯಾಂಡ್ ಕಾರು ಕೊಳ್ಳುವ ಮುನ್ನ ಸ್ವಲ್ಪ ಎಚ್ಚರ ವಹಿಸಿ. ಗುಜರಿ ಸೇರೋ ಕಾರಿಗೆ ಲಕ್ಷ ಲಕ್ಷ ಹಣ ಪೀಕಿ ವಂಚಿಸುವ ವಂಚಕರಿದ್ದಾರೆ. ಹೈ ಎಂಡ್ ಕಾರುಗಳಲ್ಲಿ ಕೀ.ಮೀ ಟ್ಯಾಂಪರಿಂಗ್ ಮಾಡ್ತಿದ್ದ ಖತರ್ನಾಕ್ ಆಸಾಮಿಯನ್ನ ಮಹಾಲಕ್ಷ್ಮಿ ಲೇಔಟ್ ಇನ್ಸ್ಪೆಕ್ಟರ್ ಕಂತರಾಜು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ.
ಯಾವ ರೀತಿ ಟ್ಯಾಂಪರಿಂಗ್ ಮಾಡ್ತಿದ್ರು ಅಂತ ನೋಡೋದಾದ್ರೆ...ಮೊದಲು ಸಾಕಷ್ಟು ಯೂಸ್ ಆಗಿದ್ದ ಕಾರುಗಳನ್ನ ಕಡಿಮೆ ಬೆಲೆಗೆ ತಂದು ಹೆಚ್ಚು ಕೀ.ಮೀ ಓಡಿದ್ದ ಕಾರುಗಳನ್ನ ಟ್ಯಾಂಪರಿಂಗ್ ಮಾಡಿ ಕಡಿಮೆ ಕೀ.ಮೀ ಗೆ ಮಾರ್ಪಾಡಿ ಮಾಡ್ತಿದ್ರು. ಇದೇ ವಿಚಾರವಾಗಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ರಿಗೆ ವ್ಯಕ್ತಿಯೊಬ್ರು ದೂರು ನೀಡಿದ್ರು. ಸಾಗರ್ ಆಟೋ ಕನ್ಸಲ್ಟೆನ್ಸಿಯ ರಾಜಣ್ಣ ಬಳಿ 1.6ಲಕ್ಷ ಕೀ.ಮೀ ಓಡಿದ್ದ ಕಾರನ್ನ ಖರೀದಿಸಿದ್ರು. ಆದ್ರೆ ಶೋ ರೂಮ್‌ನಲ್ಲಿ ವೆಹಿಕಲ್ ಚೆಕ್ ಮಂಡಿಸಿದಾಗ 2.7ಲಕ್ಷ ಕೀ.ಮೀ ರನ್ ಆಗಿರೋದು ಕನ್ಫರ್ಮ್ ಆಗಿತ್ತು. ಇದಾದ ನಂತರ ಕಾರನ್ನು ರಾಜಣ್ಣಗೆ ವಾಪಸ್ ಕೊಟ್ಟು ಹಣ ಕೊಡುವಂತೆ ಕೇಳಿದ್ರು ಹಣ ಕೊಟ್ಟಿರ್ಲಿಲ್ಲ.ಇದೇ ಕಾರಣಕ್ಕೆ ದೂರು ನೀಡಿದ್ರು. ಈ ಹಿಂದೆ ಕೂಡ ಸಾಗರ್ ಆಟೋ ಕನ್ಸಲ್ಟನ್ಸಿ ಮಾಲೀಕ ರಾಜಣ್ಣ ಮೇಲೆ ಸಾಕಷ್ಟು ದೂರಗಳು ದಾಖಲಾಗಿದ್ದ ಹಿನ್ನೆಲೆ ಆರೋಪಿ ರಾಜಣ್ಣನ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ.
Kshetra Samachara
17/03/2022 02:42 pm