ಬೆಂಗಳೂರು: ಅಲ್ಲಿ ರಸ್ತೆ ಮೇಲೆ ಒಂದು ದೇಹ ರಕ್ತಸಿಕ್ಕವಾಗಿ ಬಿದ್ದಿತ್ತು. ಇಸ್ಥಳಕ್ಕೆ ಬಂದ ಸಂಚಾರಿ ಪೊಲೀಸರು ಇದೊಂದು ಅಪಘಾತ ಅಲ್ಲಾ ಕೊಲೆ ಎಂದು ಸ್ಪಷ್ಟವಾಗಿ ಹೇಳಿದ್ರು. ಮಧ್ಯರಾತ್ರಿ 1:30ರ ಸಮಯದಲ್ಲಿ ಜೆ.ಬಿ ನಗರ ಪೊಲೀಸ್ ಠಾಣೆಗೆ ಕೋಡಿಹಳ್ಳಿ ಜಂಕ್ಷನ್ ಬಳಿ ಒಂದು ಆ್ಯಕ್ಸಿಡೆಂಟ್ ಆಗಿದೆ ವ್ಯಕ್ತಿಯೊಬ್ಬ ಸ್ಪಾಟ್ ಆಗಿದ್ದಾನೆ ಅನ್ನೋ ಕರೆ ಬಂದಿತ್ತು. ಕೂಡಲೇ ಘಟನಾ ಸ್ಥಳಕ್ಕೆ ಹೋಗಿ ಕ್ರೈಂ ಸೀನ್ ನೋಡಿದ್ದ ಜೀವನ್ ಭೀಮಾನಗರ ಸಂಚಾರಿ ಪೊಲೀಸರು ಮೊದಲಿಗೆ ಮೃತ ದೇಹವನ್ನು ಆಸ್ಪತ್ರೆಗೆ ರವಾನಿಸಲು ಮುಂದಾಗಿದ್ರು. ಬಳಿಕ ನೈಟ್ ರೌಂಡ್ಸ್‌ನಲ್ಲಿದ್ದ ಪುಲಕೇಶಿನಗರ ಎಸಿಪಿ ಹಾಗೂ ಡಿಸಿಪಿ ಸುಜೀತಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಇದು ಕೊಲೆ ಅಂತ ಅನುಮಾನ ವ್ಯಕ್ತಪಡಿಸಿದ್ದರು. ಮತ್ತೊಮ್ಮೆ ಸ್ಥಳ ಮಹಜರು ಮಾಡಿ ಡೆಡ್ ಬಾಡಿ ಪರಿಶೀಲನೆ ಮಾಡಿದಾಗಲೇ ಅದು ಆ್ಯಕ್ಸಿಡೆಂಟ್ ಅಲ್ಲ ಮರ್ಡರ್ ಅನ್ನೋದು ಗೊತ್ತಾಗಿದೆ.
ಅಸಲಿಗೆ ಆಗಿರೋದೇನಂದ್ರೆ ನಿನ್ನೆ ರಾತ್ರಿ ಗೆಳೆಯನ ಪಾರ್ಟಿ ಅಂತ ಮೃತ ಮಂಜುನಾಥ್ ಜೆ.ಬಿ ನಗರ ಠಾಣಾ ವ್ಯಾಪ್ತಿಯ ಕೋಡಿಹಳ್ಳಿ ಜಂಕ್ಷನ್ ಬಳಿ ಇರೋ ಜೆ.ಡಿ ಬಾರ್ ಆಂಡ್ ರೆಸ್ಟೋರೆಂಟ್‌ನಲ್ಲಿ ಮದ್ಯಪಾನ ಮಾಡಲು ಹೋಗಿದ್ದ. ಆರೋಪಿಗಳು ಕೂಡ ಅದೇ ಬಾರ್‌ನಲ್ಲಿ ಕೂತಿದ್ದರು. ಆರೋಪಿಗಳು ಮತ್ತು ವಿಕ್ಟಿಮ್ ಎಲ್ಲರೂ ಆಟೋ ಡ್ರೈವರ್‌ಗಳೇ. ಎಲ್ಲರೂ ಎಣ್ಣೆ ಹೊಡೆದು ಹೊರ ಬಂದಿದ್ರು. ಮೊದಲೇ ಎಣ್ಣೆ ಏಟಲ್ಲಿದ್ದ ಮಂಜುನಾಥ್ ಆಟೋ ಸ್ಟಾರ್ಟ್ ಆಗಿಲ್ಲ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಆರೋಪಿಗಳು ಮಂಜುನಾಥ್ ಜೊತೆ ಜಗಳ ಮಾಡಿಕೊಂಡೊದ್ದರು. ಆಗ ಎಣ್ಣೆ ಏಟಲ್ಲೇ ಮಂಜುನಾಥ್ ನನ್ನ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದಾರೆ. ಕಲ್ಲು, ಸಿಮೆಂಟ್ ಇಟ್ಟಿಗೆಯಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಪರಿಣಾಮ ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಳಿಕ ನಶೆ ಇಳಿಸಿಕೊಂಡಿದ್ದ ಆರೋಪಿಗಳು ತಪ್ಪಿಸೋಕೆ ಆ್ಯಕ್ಸಿಡೆಂಟ್ ಆದಂತೆ ಕ್ರೈಂ ಸೀನ್ ಕ್ರಿಯೇಟ್ ಮಾಡಿ ಎಸ್ಕೇಪ್ ಆಗಿದ್ರು.
ಸದ್ಯ ಕೊಲೆ ಕೇಸ್ ದಾಖಲು ಮಾಡಿಕೊಂಡಿದ್ದ ಜೀವನ್ ಭೀಮಾ ನಗರ ಪೊಲೀಸರು ಕೇಸ್ ದಾಖಲು ಮಾಡಿಕೊಂಡು ಕೊಲೆ ಮಾಡಿರುವ ಅರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
Kshetra Samachara
15/03/2022 08:38 pm