ಬೆಂಗಳೂರು ದಕ್ಷಿಣ: ಲಾರಿಗಳಲ್ಲಿ ಡೀಸೆಲ್ ಕದಿಯಲು ಬಂದಿದ್ದ ಕಳ್ಳರ ಮೇಲೆ ಬೆಳ್ಳಂಬೆಳಗ್ಗೆ ಜಿಗಣಿ ಪೊಲೀಸರು ಗುಂಡು ಹಾರಿಸಿದ್ದಾರೆ.
ಹೌದು. ಬೆಂಗಳೂರು ಹೊರವಲಯ ಆನೇಕಲ್ ಸಮೀಪದ ಜಿಗಣಿ ಕೈಗಾರಿಕಾ ಪ್ರದೇಶದ ಕೆಇಬಿ ಸರ್ಕಲ್ ಬಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬಳ್ಳಾರಿ ಮೂಲದ ಶ್ರೀನಿವಾಸ್ ಅಲಿಯಾಸ್ ರಾಜು ಎಂಬುವವರ ಕಾಲಿಗೆ ಗುಂಡೇಟು ಹೊಡೆದು ಮತ್ತೋರ್ವ ಸಹಚರ ಕಲಬುರಗಿ ಮೂಲದ ಚಾಲಕ ಮಲ್ಲನಗೌಡನನ್ನು ಬಂಧಿಸಿದ್ದಾರೆ.
ಜಿಗಣಿ ಠಾಣೆ ಇನ್ಸ್‌ಪೆಕ್ಟರ್ ಸುದರ್ಶನ್ ಹಾಗೂ ಅವರ ತಂಡ ಮೇಲೆ ಆರೋಪಿಗಳು ಮಾರಕಾಸ್ತ್ರಗಳನ್ನು ಬೀಸಿದ್ದಾರೆ. ಪರಿಣಾಮ ಪೊಲೀಸ್ ಕಾನ್ಸ್‌ಟೇಬಲ್ ಕೊಟೇಶ್ ಅವರಿಗೆ ಗಾಯವಾಗಿದೆ. ಇದರಿಂದಾಗಿ ಇನ್ಸ್‌ಪೆಕ್ಟರ್ ಸುದರ್ಶನ್ ಆರೋಪಿಯೊಬ್ಬನ ಕಾಲಿಗೆ ಗುಂಡಿಕ್ಕಿ ಬಂಧಿಸಿದ್ದಾರೆ.
PublicNext
13/03/2022 03:12 pm